ದಾವಣಗೆರೆ: ಪ್ರಸಕ್ತ ಸಾಲಿನಲ್ಲಿ ಬಂಜಾರ ಸಮುದಾಯದ ಸಾಂಪ್ರದಾಯಿಕ ಸಂಸ್ಕೃತಿ ಮತ್ತು ಕಲೆಗಳನ್ನು ಉಳಿಸಿ-ಬೆಳಸಿ ಪುನಶ್ಚೇತನಗೊಳಿಸುವ ಉದ್ದೇಶದಿಂದ ಮತ್ತು ಬಂಜಾರ ಕಲಾವಿದರ ಪ್ರತಿಭೆಯನ್ನು ಹೊರಹೊಮ್ಮಿಸಲು ಬಂಜಾರರ ಬಹುಮುಖಿ ಕಲಾ ಪ್ರತಿಭಾನ್ವೇಷಣೆ-ಕಲಾ ಮಳಾವ್ ಕಾರ್ಯಕ್ರಮಕ್ಕೆ ಅರ್ಹ ಬಂಜಾರ ಸಮುದಾಯದ ಕಲಾವಿದರಿಂದ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 28 ಕೊನೆಯ ದಿನವಾಗಿದೆ.ಕಾರ್ಯಕ್ರಮದಲ್ಲಿ , ವಾಜಾ ವಾದ್ಯ ಸಮೂಹ ಗೀತೆ, ಗಾಯನ ಮತ್ತು ನೃತ್ಯ, ಜಾನಪದ ನೃತ್ಯ, ಘೂಮರ್ ನೃತ್ಯ, ಪುರುಷರ ಲೇಹಂಗಿ ನೃತ್ಯ, ನಂಗಾರ ಠೋಳಿ ಬಿಡಿಸುವ ನೃತ್ಯ, ಕಥನ ಗಾಯನ, ಮಹಿಳೆಯರ ಸಾಂಪ್ರದಾಯಕ ಗಾಯನ, ಸುಗಮ ಸಂಗೀತ, ಬಾಲಕ ಮತ್ತು ಬಾಲಕಿಯರ ಕಲಾ ನೃತ್ಯ , ಢಾವಲೋ ಮತ್ತು ಹವೇಲಿ ನೃತ್ಯ, ಪುರುಷರ ಸಾಂಪ್ರದಾಯಕ ಕಡಿ ಪ್ರಕಾರುಗಳಿಗೆ ಅರ್ಹ ಆಸಕ್ತ ಕಲಾವಿದರಿಂದ ಅರ್ಜಿ ಸಲ್ಲಿಸಬಹುದಾಗಿದೆ ಎಂದು ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮ ಪ್ರಕಟಣೆಯಲ್ಲಿ ತಿಳಿಸಿದೆ.



