ದಾವಣಗೆರೆ: 1.05 ಲಕ್ಷ ಮೌಲ್ಯದ 05 ಬೈಕ್ ಕಳ್ಳತನ ಮಾಡಿದ್ದ ಕಾನೂನು ಸಂಘರ್ಷಕ್ಕೆ ಒಳಗಾದ ಒಬ್ಬ ಬಾಲಕನನ್ನು ಬಡಾವಣೆ ಪೊಲೀಸರು ಬಂಧಿಸಿದ್ದಾರೆ.
ಬಡಾವಣೆ ಪೊಲೀಸ್ ಠಾಣೆಯ ಪಿಎಸ್ ಐ ಚಿದಾನಂದಪ್ಪ ಎಸ್ .ಬಿ ಅವರು ಏ.19 ರಂದು ಪಿಬಿ ರಸ್ತೆಯ ರೈಲ್ವೆ ನಿಲ್ದಾಣ ಬಳಿ ಗಸ್ತಿನಲ್ಲಿದ್ದಾಗ ಕಾನೂನು ಸಂಘರ್ಷಕ್ಕೆ ಒಳಗಾದ ಯುವಕ ಕೆಎ ಇಕೆ 6264 ಡಿಯೋ ಬೈಕ್ ನಲ್ಲಿ ಬಂದಿದ್ದು, ಈ ವೇಳೆ ಪೊಲೀಸ್ ಠಾಣೆಗೆ ಕರೆ ತಂದು ವಿಚಾರಣೆ ಮಾಡಿದಾಗ ಕೆಲವು ತಿಂಗಳಿಂದ ನಗರದ ಪಿಜೆ ಬಡಾವಣೆ, ಗುಂಡಿ ಸರ್ಕಲ್ , ಎಂಸಿಸಿ ಎ ಬ್ಲಾಕ್ , ಕೆ.ಬಿ ಬಡಾವಣೆ ಯಲ್ಲಿ ಒಟ್ಟು 05 ಬೈಕ್ ಕಳ್ಳತನ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ.
ಬಡಾವಣೆ ಪೊಲೀಸ್ ಠಾಣೆಯ 04 ಹಾಗೂ ಕೆಟಿಜೆ 02 ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 05 ಬೈಕ್ ಗಳನ್ನು ವಶಕ್ಕೆ ಪಡೆಯಲಾಗಿದೆ. ಒಟ್ಟು 1,0500 ರೂಪಾಯಿ ಬೆಲೆಬಾಳುವ ಬೈಕ್ ವಶಕ್ಕೆ ಪಡೆಯಲಾಗಿದೆ.



