ದಾವಣಗೆರೆ: ಜಿಲ್ಲೆಯ ಪ್ರಸಿದ್ಧ ರಥೋತ್ಸವಗಳಲ್ಲೊಂದಾದ ದಾವಣಗೆರೆ ತಾಲ್ಲೂಕಿನ ಆವರಗೊಳ್ಳದ ಶ್ರೀ ವೀರಭದ್ರೇಶ್ವರ ರಥೋತ್ಸವವೂ ಇಂದು(ಫೆ.28) ವಿಜೃಂಭಣೆಯಿಂದ ನಡೆಯಿತು. ಅದ್ಧೂರಿಯಾಗಿ ಜರುಗಿದ ರಥೋತ್ಸವವನ್ನು ಸಹಸ್ರಾರು ಭಕ್ತರು ಕಣ್ತುಂಬಿಕೊಂಡು ಭಕ್ತಿ ಸಮರ್ಪಿಸಿದರು.
ಬೆಳಗ್ಗೆ ಉತ್ಸವಕ್ಕೆ ಚಾಲನೆ ನೀಡಲಾಗಿತ್ತು. ಸಂಜೆ ಶ್ರೀ ವೀರಭದ್ರೇಶ್ವರ ಸ್ವಾಮಿಯಮಹಾರಥೋತ್ಸವ ಅಪಾರ ಭಕ್ತ ಸಮ್ಮಖದಲ್ಲಿ ಅದ್ಧೂರಿಯಾಗಿ ನೆರವೇರಿತು. ವೀರಭದ್ರೇಶ್ವರ ಸ್ವಾಮಿ ಸನ್ನಿಧಿಗೆ ದೊಡ್ಡಬಾತಿ ಶ್ರೀ ರೇವಣಸಿದ್ದೇಶ್ವರ ಸ್ವಾಮಿ ಮತ್ತು ಶ್ರೀ ಬೀರಲಿಂಗೇಶ್ವರ ಸ್ವಾಮಿ ದೇವರು ಆಗಮಿಸಿದ್ದವು. ಬೆಳಗ್ಗೆ 5 ಗಂಟೆಯಿಂದಲೇ ಸುತ್ತಮುತ್ತಲಿನ ಗ್ರಾಮದ ಭಕ್ತರು ಕಾಲ್ನಡಿಗೆ ಮೂಲಕ ಶ್ರೀ ಕ್ಷೇತ್ರಕ್ಕೆ ನಡೆದುಕೊಂಡು ಬಂದು ದರ್ಶನ ಪಡೆದರು.
ವೀರಭದ್ರೇಶ್ವರ ಸ್ವಾಮಿ, ದೊಡ್ಡಬಾತಿ ಶ್ರೀ ರೇವಣಸಿದ್ದೇಶ್ವರ ಸ್ವಾಮಿ ಮತ್ತು ಶ್ರೀ ಬೀರಲಿಂಗೇಶ್ವರ ಸ್ವಾಮಿ ಪಲ್ಲಕ್ಕಿ ಉತ್ಸವ ಮೂಲಕ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಭಕ್ತರ ಸಮ್ಮುಖದಲ್ಲಿ ಅದ್ಧೂರಿಯಾಗಿ ರಥೋತ್ಸವ ನೆರವೇರಿತು. ನಾಳೆ (ಫೆ.29) ಬೆಳಗ್ಗೆ ಗುಗ್ಗಳ ಸೇವೆ ಹಾಗೂ ರಾತ್ರಿ ಓಕಳಿ ಸೇವೆ ಮತ್ತು ಗಂಗಾ ಪೂಜೆ, ವೀರಗಾಸೆ ನಡೆಯಲಿದೆ.



