Connect with us

Dvgsuddi Kannada | online news portal | Kannada news online

ದಾವಣಗೆರೆ: ಇದುವರೆಗೆ ನೀತಿ ಸಂಹಿತೆ ಉಲ್ಲಂಘಿಸಿದ 5.04 ಕೋಟಿಯಷ್ಟು ನಗದು, ಮದ್ಯ ಸಹಿತ ಇತರೆ ವಸ್ತುಗಳ ವಶ; ಡಿಸಿ ಮಾಹಿತಿ

ದಾವಣಗೆರೆ

ದಾವಣಗೆರೆ: ಇದುವರೆಗೆ ನೀತಿ ಸಂಹಿತೆ ಉಲ್ಲಂಘಿಸಿದ 5.04 ಕೋಟಿಯಷ್ಟು ನಗದು, ಮದ್ಯ ಸಹಿತ ಇತರೆ ವಸ್ತುಗಳ ವಶ; ಡಿಸಿ ಮಾಹಿತಿ

ದಾವಣಗೆರೆ : ಸಾರ್ವತ್ರಿಕ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ನೀತಿ ಸಂಹಿತೆ ಜಾರಿಯಲ್ಲಿದ್ದು, ಜಿಲ್ಲೆಯಾದ್ಯಂತ ಚೆಕ್‍ ಪೊಸ್ಟ್ ವ್ಯವಸ್ಥೆ ಮಾಡಲಾಗಿದೆ. ಮೇ 08 ರಂದು 6,45,000 ನಗದು ಮತ್ತು ರೂ.24,367 ಮೌಲ್ಯದ 77.96 ಲೀ ಮದ್ಯ ವಶಪಡಿಸಿಕೊಳ್ಳಲಾಗಿದೆ‌ ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಶಿವಾನಂದ ಕಾಪಶಿ ತಿಳಿಸಿದ್ದಾರೆ. ಇದುವರೆಗೆ ದಾವಣಗೆರೆ ಜಿಲ್ಲೆಯಲ್ಲಿ ರೂ.10119057 ನಗದು, ರೂ.31802169.99 ಮೌಲ್ಯದ 47498.135 ಲೀ ಮದ್ಯ, 3.853 ಕೆ.ಜಿ ಮಾದಕ ವಸ್ತು ಅಂದಾಜು ಮೌಲ್ಯ ರೂ.71610, ರೂ.8500048 ಮೌಲ್ಯದ ಕುಕ್ಕರ್ ಸೇರಿದಂತೆ ಇತರೆ ವಸ್ತುಗಳು ಸೇರಿ ಒಟ್ಟು ರೂ.5.04 ಕೋಟಿಯಷ್ಟು ನಗದು ಮತ್ತು ಇತರೆ ವಸ್ತುಗಳನ್ನು ನೀತಿ ಸಂಹಿತೆ ಆರಂಭವಾದಾಗಿನಿಂದ ಇಲ್ಲಿಯವರೆಗೆ ವಶಪಡಿಸಿಕೊಳ್ಳಲಾಗಿದೆ.

ಜಿಲ್ಲೆಯಾದ್ಯಂತ ವಿವಿಧ ಚೆಕ್‍ ಪೊಸ್ಟ್ ಗಳಲ್ಲಿ ಕಟ್ಟುನಿಟ್ಟಿನ ತಪಾಸಣೆ ಕೈಗೊಳ್ಳಲಾಗುತ್ತಿದೆ. ದಾವಣಗೆರೆ ಉತ್ತರ ಕ್ಷೇತ್ರದಲ್ಲಿ ಮತದಾರರಿಗೆ ಹಂಚಿಕೆ ಮಾಡಲು ಹಣ ಸಂಗ್ರಹಿಸಲಾಗಿದೆ ಎಂಬ ಮಾಹಿತಿ ಮೇರೆಗೆ ಪಕ್ಷವೊಂದರ ಕಾರ್ಯಕರ್ತರ ಮನೆ ತಪಾಸಣೆ ಮಾಡಿದ ವೇಳೆ ರೂ.645000 ನಗದು ವಶಪಡಿಸಿಕೊಂಡು ಖಜಾನೆಯಲ್ಲಿ ಇಡಲಾಗಿದೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

Advertisement

ದಾವಣಗೆರೆ

Advertisement
To Top