Connect with us

Dvgsuddi Kannada | online news portal | Kannada news online

ದಾವಣಗೆರೆ: ಅಡಿಕೆಗೆ ಮತ್ತೆ ಬಂಪರ್ ಬೆಲೆ; ಹೊಸ ವರ್ಷಕ್ಕೆ 50 ಸಾವಿರ ಗಡಿ ಸಮೀಪ..! ಇಂದಿನ ಕನಿಷ್ಠ, ಗರಿಷ್ಠ ದರ ಎಷ್ಟಿದೆ..?

ದಾವಣಗೆರೆ

ದಾವಣಗೆರೆ: ಅಡಿಕೆಗೆ ಮತ್ತೆ ಬಂಪರ್ ಬೆಲೆ; ಹೊಸ ವರ್ಷಕ್ಕೆ 50 ಸಾವಿರ ಗಡಿ ಸಮೀಪ..! ಇಂದಿನ ಕನಿಷ್ಠ, ಗರಿಷ್ಠ ದರ ಎಷ್ಟಿದೆ..?

ದಾವಣಗೆರೆ: ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾದ ಅಡಿಕೆಗೆ ಬಂಪರ್ ಬೆಲೆ ಬಂದಿದೆ. ಇಂದು (ಡಿ.22) ರಾಶಿ ಅಡಿಕೆ ಬೆಲೆಯಲ್ಲಿ ಮತ್ತೆ ಏರಿಕೆ ಕಂಡಿದೆ. ಇವತ್ತು ರಾಶಿ ಅಡಿಕೆ ಕ್ವಿಂಟಲ್ ಗೆ ಗರಿಷ್ಠ‌ ಬೆಲೆ 48,700 ರೂಪಾಯಿಗಳಾಗಿದ್ದು, ಕನಿಷ್ಠ ಬೆಲೆ 46,352 ರೂ. ಆಗಿದೆ. ಈ‌ ತಿಂಗಳು ವರ್ಷದ ಕೊನೆಯ ಕೊಯ್ಲು ಆಗಿದ್ದು. ಈ ತಿಂಗಳಲ್ಲಿಯೇ ಬೆಲೆ ಏರಿಕೆ‌‌ ಕಂಡಿದ್ದು,‌ ಇಂದು ಒಂದೇ ದಿನ 300 ರೂ. ಹೆಚ್ಚಳವಾಗಿದೆ. ಇದೇ ರೀತಿ ದಿನದಿಂದ ದಿನಕ್ಕೆ ಹೆಚ್ಚಳ‌‌ವಾದ್ರೆ ಹೊಸ ವರ್ಷಕ್ಕೆ 50 ಸಾವಿರ ಗಡಿದಾಟಿದರೂ ಅಚ್ಚರಿ ಪಡಬೇಕಿಲ್ಲ.‌ ಮುಂಬರುವ ದಿನಗಲ್ಲಿ‌‌ ಇನ್ನಷ್ಟು‌ ಹೆಚ್ಚಳವಾಗುವ‌ ಸಾಧ್ಯತೆ‌ ಇದ್ದು, ಸ್ವಲ್ಪ‌ ದಿನ ಅಡಿಕೆ ಇಟ್ಟು ಮಾರಾಟ ಮಾಡುವವರಿಗೆ ಒಳ್ಳೆ ಲಾಭಾಂಶವಾಗಲಿದೆ.

ಈ ವರ್ಷದ ಅಡಿಕೆ ಬೆಲೆಯಲ್ಲಿ ಸಾಕಷ್ಟು ಏರಿಳಿತ ಕಂಡಿದ್ದರೂ, ವರ್ಷದ ಕೊನೆ ತಿಂಗಳಲ್ಲಿ ಮತ್ತೆ ಏರಿಕೆಯಾಗಿದ್ದು, ರೈತರರಲ್ಲಿ ಸಂತಸ ಮೂಡಿದೆ. 2023ರ ಏಪ್ರಿಲ್ ನಲ್ಲಿ 48 ಸಾವಿರವಿದ್ದ ಬೆಲೆ, ಮೇನಲ್ಲಿ 49 ಸಾವಿರ ಗಡಿ ದಾಟಿತ್ತು. ಜೂನ್ ನಲ್ಲಿ 50 ಸಾವಿರ ಗಡಿ ದಾಟಿದ್ದ ಬೆಲೆ, ಜುಲೈನಲ್ಲಿ ಗರಿಷ್ಠ 57 ಸಾವಿರ ತಲುಪಿತ್ತು. ಆಗಸ್ಟ್ ತಿಂಗಳಲ್ಲಿ ಸತತ ಇಳಿಕೆ ಕಂಡು 48 ಸಾವಿರ ತಲುಪಿತ್ತು. ಸೆಪ್ಟೆಂಬರ್‌ ಮೊದಲ 15 ದಿನ ‌46 ಸಾವಿರಕ್ಕೆ ಕುಸಿದು ಆತಂಕ ಉಂಟು ಮಾಡಿತ್ತು. ಆದರೆ, ಅಕ್ಟೋಬರ್ ‌ಕೊನೆಯ ವಾರ ಮತ್ತೆ 47,800 ಏರಿಕೆ ಕಂಡಿತ್ತು. ನವೆಂಬರ್ ನಲ್ಲಿ 47 ಸಾವಿರಕ್ಕೆ ತಲುಪಿ ಸ್ಥಿರವಾಗಿತ್ತು. ಡಿಸೆಂಬರ್ ಮೊದಲ ವಾರದಲ್ಲಿಯೂ ಸಹ 100, 200 ರೂಪಾಯಿ ಏರಿಳಿತ ಕಂಡರೂ 47 ಸಾವಿರ ಗಡಿದಾಟಿ ಬೆಲೆ ಸ್ಥಿರವಾಗಿತ್ತು. ಇದೀಗ ಬೆಲೆ 49 ಸಾವಿರ ಗಡಿಯತ್ತ ಬಂದಿದೆ‌.

ಈ ವರ್ಷ ಮುಂಗಾರು ಮಳೆ‌ ಕೈ‌ಕೊಟ್ಟಿದ್ದು, ಮಳೆಗಾಲದಲ್ಲಿಯೇ ಬೇಸಿಗೆ ವಾತಾವರಣ ನಿರ್ಮಾಣವಾಗಿತ್ತು. ಇನ್ನೂ ಜನವರಿ 15ರ ನಂತರ ಬೇಸಿಗೆ ಅಧಿಕೃತವಾಗಿ ಶುರುವಾಗಲಿದೆ. ಈ ಸಲ ಮಳೆ ಕೊರತೆಯಿಂದ ಬೇಸಿಗೆಯಲ್ಲಿ ಬಿಸಿಲಿನ ಪ್ರಮಾಣ ಯಾವ ಮಟ್ಟಕ್ಕೆ ಇರಲಿದೆ ಎಂದು ನಿರೀಕ್ಷೆಯೂ ಕಷ್ಟವಾಗಿದೆ. ಈಗಾಗಲೇ ಅಂತರ್ಜಲ ಮಟ್ಟ ಕುಸಿತ ಕಂಡಿದ್ದು, ಬೇಸಿಗೆಯಲ್ಲಿ ಅಡಿಕೆ ತೋಟ ಉಳಿಸಿಕೊಳ್ಳುವುದೇ ರೈತರಿಗೆ ಸವಾಲಾಗಿದೆ. ಅದರಲ್ಲೂ ಏಪ್ರಿಲ್, ಮೇ ಎರಡು ತಿಂಗಳು ಹೇಗಾದ್ರೂ ಮಾಡಿ ಬದುಕಿಸಿದ್ರೆ ಸಾಕು ಎನ್ನುವಂತಾಗಿದೆ.

ಜಿಲ್ಲೆಯ ಪ್ರಮುಖ ಮಾರುಕಟ್ಟೆಯಾದ ಚನ್ನಗಿರಿ ವಹಿವಾಟಿನಲ್ಲಿ ಡಿ.22ರಂದು ಪ್ರತಿ ಕ್ವಿಂಟಾಲ್ ಉತ್ತಮ ರಾಶಿ ಅಡಿಕೆ ಕನಿಷ್ಠ ಬೆಲೆ 46,352, ಗರಿಷ್ಠ ಬೆಲೆ 48,700 ಹಾಗೂ ಸರಾಸರಿ ಬೆಲೆ 48,306 ರೂ.ಗೆ ಮಾರಾಟವಾಗಿದೆ. ಇನ್ನೂ ಬೆಟ್ಟೆ ಅಡಿಕೆ ಗರಿಷ್ಠ 37,899ರೂ‌.ಗೆ ಮಾರಾಟವಾಗಿದೆ.

 

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

Advertisement

ದಾವಣಗೆರೆ

Advertisement
To Top