ದಾವಣಗೆರೆ: ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾದ ಅಡಿಕೆ ಧಾರಣೆಯಲ್ಲಿ ಮತ್ತಷ್ಟು ಏರಿಕೆಯಾಗಿದೆ. ಮಾರ್ಚ್ ಅಂತ್ಯದಲ್ಲಿ 45 ಸಾವಿರಕ್ಕೆ ಕುಸಿದಿದ್ದ ದರ, ಏಪ್ರಿಲ್ ಆರಂಭದಲ್ಲಿ ಸ್ವಲ್ಪ ಚೇತರಿಕೆ ಕಂಡು ಬೆಲೆ ಏರಿಕೆಯತ್ತ ಮುಖ ಮಾಡಿತ್ತು. ಇದೀಗ ಇಂದು (ಮೇ 24) ಉತ್ತಮ ರಾಶಿ ಅಡಿಕೆ ಗರಿಷ್ಠ ಬೆಲೆ 49,100 ರೂ.ಗೆ ಮಾರಾಟವಾಗಿದೆ. ಹಿಂದಿನ ದಿನದ ಮಾರುಕಟ್ಟೆಗೆ ಹೋಲಿಸಿದರೆ 350 ರೂಪಾಯಿಯಷ್ಟು ಚೇತರಿಕೆ ಕಂಡಿದೆ.
ಜಿಲ್ಲೆಯ ಪ್ರಮುಖ ಮಾರುಕಟ್ಟೆಯಾದ ಚನ್ನಗಿರಿ ಅಡಿಕೆ ವಹಿವಾಟಿನಲ್ಲಿ ಮೇ 24ರಂದು ಪ್ರತಿ ಕ್ವಿಂಟಾಲ್ ಉತ್ತಮ ರಾಶಿ ಅಡಿಕೆ ಕನಿಷ್ಠ ಬೆಲೆ 47,399, ಗರಿಷ್ಠ ಬೆಲೆ 49,100 ಹಾಗೂ ಸರಾಸರಿ ಬೆಲೆ 48,532 ರೂ. ಆಗಿದೆ. ಇದೇ ವೇಳೆ ಬೆಟ್ಟೆ ಅಡಿಕೆ ಗರಿಷ್ಠ 36,239 ರೂ.ಗೆ ಮಾರಾಟವಾಗಿದೆ.