ದಾವಣಗೆರೆ: ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾದ ಅಡಿಕೆ ದರ (arecanut rate) ಭರ್ಜರಿ ಚೇತರಿಕೆ ಕಂಡಿದೆ. ಡಿಸೆಂಬರ್ ಆರಂಭದಿಂದಲೂ ಸತತ ಕುಸಿತ ಕಾಣುತ್ತಿದ್ದ ದರ ಈಗ ಕೇವಲ 12 ದಿನದಲ್ಲಿ ಸತತ ಏರಿಕೆ ಕಂಡಿದೆ. ಇದರ ಪರಿಣಾಮ ಇಂದು (ಡಿ.5) ಪ್ರತಿ ಕ್ವಿಂಟಲ್ ಗೆ ಗರಿಷ್ಠ ಬೆಲೆ 59,209 ರೂ.ಗೆ ಏರಿಕೆಯಾಗಿದೆ. ಈ ಮೂಲಕ ಡಿಸೆಂಬರ್ 15ರವರೆಗೆ 55 ಸಾವಿರ ಗಡಿಯಲ್ಲಿದ್ದ ದರ ಈಗ 60 ಸಾವಿರ ಸಮೀಪ ಬಂದಿದೆ.
ನವೆಂಬರ್ ತಿಂಗಳ ಆರಂಭದಲ್ಲಿ ಪ್ರತಿ ಕ್ವಿಂಟಲ್ ಅಡಿಕೆ ದರ 60 ಸಾವಿರ ಇತ್ತು. ಡಿಸೆಂಬರ್ ಆರಂಭವಾಗುತ್ತಿದ್ದಂತೆ ಸತತ ಕುಸಿತ ಕಂಡು 55 ಸಾವಿರಕ್ಕೆ ಕುಸಿದಿತ್ತು. ಈಗ ಚೇತರಿಕೆ ಕಂಡು 60 ಸಾವಿರ ಗಡಿಯತ್ತ ಸಾಗುತ್ತಿದೆ. ಈ ಮೂಲಕ ಕೊಯ್ಲು ಮುಗಿಸಿದ ರೈತರಲ್ಲಿ ದರ ಏರಿಕೆ ಖುಷಿ ನೀಡಿದೆ.
ಭದ್ರಾ ಜಲಾಶಯ; ಜ.3ರಿಂದ ಎಡದಂಡೆ, ಜ.8ರಿಂದ ಬಲದಂಡೆ ನಾಲೆಗೆ ಹರಿಸಲು ತೀರ್ಮಾನ
- ಜ.05 ಚನ್ನಗಿರಿ ಅಡಿಕೆ ಧಾರಣೆ (ಪ್ರತಿ ಕ್ವಿಂಟಲ್ ದರ)
- ಗರಿಷ್ಠ ಬೆಲೆ 59,209
- ಕನಿಷ್ಠ ಬೆಲೆ 56,599
- ಸರಾಸರಿ ಬೆಲೆ 58,442
ಜಿಲ್ಲೆಯ ಪ್ರಮುಖ ಮಾರುಕಟ್ಟೆಯಾದ ಚನ್ನಗಿರಿ (Channagiri) ವಹಿವಾಟಿನಲ್ಲಿ ಜ.2ರಂದು ರಾಶಿ ಅಡಿಕೆ ಗರಿಷ್ಠ ಬೆಲೆ ಕ್ವಿಂಟಲ್ ಗೆ 59,209 ರೂ. ಇದ್ದು, ಕನಿಷ್ಠ ಬೆಲೆ 56,599 ರೂ., ಸರಾಸರಿ ಬೆಲೆ 58,442 ರೂ.ಇದೆ. ಜಿಲ್ಲೆಯ ಚನ್ನಗಿರಿ, ಹೊನ್ನಾಳಿ, ದಾವಣಗೆರೆ, ಹರಿಹರ, ಜಗಳೂರು ತಾಲ್ಲೂಕಿನಲ್ಲಿ ಅಡಿಕೆ ಮುಖ್ಯ ಬೆಳೆಯಾಗಿದೆ.
ದಾವಣಗೆರೆ; ಫೆ.24,25 ರಂದು ನಗರ ದೇವತೆ ದುಗ್ಗಮ್ಮ ಜಾತ್ರೆ; ವಿಜೃಂಭಣೆಯಿಂದ ಆಚರಿಸಲು ತೀರ್ಮಾನ
ಜಿಲ್ಲೆಯಲ್ಲಿ ಕೊಯ್ಲು ಸಂಪೂರ್ಣ ಮುಗಿದಿದೆ. ಇದೇ ಖುಷಿಯಲ್ಲಿ ದರ ಸಹ ಏರಿಕೆಯಾಗಿದ್ದು ರೈತರಿಗೆ ಸಂತಸ ಮತ್ತಷ್ಟು ಹೆಚ್ವಿಸಿದೆ. ಈ ವರ್ಷ ಹಸಿ ಅಡಿಕೆ ಮಾರಾಟ ಮಾಡಿದವರು ಒಂದಿಷ್ಟು ಲಾಭ ಗಳಿಸಿದ್ದು, ಖೇಣಿ ಕೊಟ್ಟವರು ಸ್ವಲ್ಪ ನಷ್ಟ ಅನುಭವಿಸಿದ್ದಾರೆ. ಏಕೆಂದರೆ ಖೇಣಿ ಕೊಡುವಾಗ ದರ ತೀವ್ರ ಕುಸಿತ ಇತ್ತು. ನಂತರ ಯಾರು ನಿರೀಕ್ಷೆ ಮಾಡದ ದರಕ್ಕೆ ಏರಿಕೆಯಾಗಿತ್ತು. ಒಣ ಅಡಿಕೆ ತೂಕಕ್ಕೆ ಕೊಟ್ಟವರು ಸಹ ಲಾಭ ಗಳಿಸಿದ್ದಾರೆ.
- ಕಳೆದ ಮೂರು ವರ್ಷದ ಗರಿಷ್ಠ ದರ ವಿವರ
- 2023 ಜುಲೈ ತಿಂಗಳಲ್ಲಿ ಗರಿಷ್ಠ ಬೆಲೆ 57 ಸಾವಿರ
- 2024 ಮೇ ತಿಂಗಳಲ್ಲಿ ಗರಿಷ್ಠ ದರ 55 ಸಾವಿರ
- 2025 ಅಕ್ಟೋಬರ್ ನಲ್ಲಿ ಗರಿಷ್ಠ ದರ 68,349 ರೂ.
2025ರ ಜನವರಿ ಕೊನೆಯಲ್ಲಿ 52 ಸಾವಿರ ಒಳಗೆ ಇದ್ದ ದರ, ಫೆಬ್ರವರಿಯಲ್ಲಿ ಮತ್ತೆ 53 ಸಾವಿರ ಗಡಿದಾಟಿತ್ತು. ಮಾರ್ಚ್ ಮೊದಲ ವಾರದಲ್ಲಿ ಸ್ವಲ್ಪ ಇಳಿಕೆಯಾಗಿದ್ದು, ತಿಂಗಳ ಕೊನೆಯಲ್ಲಿ ಮತ್ತೆ 53 ಸಾವಿರ ಗಡಿ ಮುಟ್ಟಿತ್ತು. ಮೇ ತಿಂಗಳಲ್ಲಿ 59,512 ರೂ.ಗೆ ಇಳಿದಿದ್ದು, ಜೂನ್ ಆರಂಭದಲ್ಲಿ 59,000 ರೂ. ಇದ್ದು ಕೊನೆಯಲ್ಲಿ 56,599 ರೂ. ಗೆ ಇಳಿಕೆಯಾಗಿತ್ತು. ಜುಲೈ ಮೊದಲ ವಾರ ಚೇತರಿಕೆ ಕಂಡು ಈಗ 58,099 ರೂ. ಆಗಿತ್ತು. ಆಗಸ್ಟ್ ಆರಂಭದಲ್ಲಿ ಸತತ ಏರಿಕೆ ಕಂಡು ಕ್ವಿಂಟಲ್ ಗೆ 60,500ರೂ. ತಲುಪಿತ್ತು. ಈಗ ಸೆಪ್ಟೆಂಬರ್ ನಲ್ಲಿ 62,889 ರೂ. ಇತ್ತು. ಅಕ್ಟೋಬರ್ ತಿಂಗಳಲ್ಲಿ ಈ ವರ್ಷದಲ್ಲಿಯೇ ಗರಿಷ್ಠ ಬೆಲೆ 68, 349 ರೂ. ಇತ್ತು. ನವೆಂಬರ್ 60 ಸಾವಿರ ಗಡಿ ದಾಟಿತ್ತು. ಡಿಸೆಂಬರ್ 58,35 ರೂ. ಇತ್ತು. 2026 ವರ್ಷದ ಮೊದಲ ತಿಂಗಳು 59,209 ಇದೆ.



