ದಾವಣಗೆರೆ: ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾದ ಅಡಿಕೆ ದರವು (arecanut rate) ಭರ್ಜರಿ ಏರಿಕೆ ಕಂಡಿದೆ. ಜುಲೈ ತಿಂಗಳು ಪೂರ್ತಿ ಸ್ಥಿರವಾಗಿದ್ದ ದರ, ಇದೀಗ ಆಗಸ್ಟ್ ಆರಂಭದಿಂದ ಸತತ ಏರಿಕೆ ಕಾಣುತ್ತಿದೆ. ಇಂದು (ಆ. 25) 60,500 ಇದ್ದು, ರೈತರಲ್ಲಿ ಸಂತಸ ತಂದಿದೆ.
ಆ.25ರ ಚನ್ನಗಿರಿ ರಾಶಿ ಅಡಿಕೆ ಧಾರಣೆ (ಪ್ರತಿ ಕ್ವಿಂಟಲ್ ದರ)
- ಗರಿಷ್ಠ ಬೆಲೆ 60,500
- ಕನಿಷ್ಠ ಬೆಲೆ 54,012
- ಸರಾಸರಿ ಬೆಲೆ 58,195
ಜಿಲ್ಲೆಯ ಪ್ರಮುಖ ಮಾರುಕಟ್ಟೆಯಾದ ಚನ್ನಗಿರಿ (Channagiri) ವಹಿವಾಟಿನಲ್ಲಿ ಆ.25 ರಂದು ರಾಶಿ ಅಡಿಕೆ ಗರಿಷ್ಠ ಬೆಲೆ ಕ್ವಿಂಟಲ್ ಗೆ 60,500 ಇದ್ದು, ಕನಿಷ್ಠ ಬೆಲೆ 54,012 ರೂ., ಸರಾಸರಿ ಬೆಲೆ 58,195 ರೂ.ಇದೆ. ಜಿಲ್ಲೆಯ ಚನ್ನಗಿರಿ, ಹೊನ್ನಾಳಿ, ದಾವಣಗೆರೆ, ಹರಿಹರ, ಜಗಳೂರು ತಾಲ್ಲೂಕಿನಲ್ಲಿ ಅಡಿಕೆ ಮುಖ್ಯ ಬೆಳೆಯಾಗಿದೆ. ಜಿಲ್ಲೆಯಲ್ಲಿ ಉತ್ತಮವಾಗಿ ಮುಂಗಾರು ಮಳೆಯಾಗುತ್ತಿದ್ದು, ರೈತರಲ್ಲಿ ಖುಷಿ ತಂದಿದೆ.
2025ರ ಜನವರಿ ಕೊನೆಯಲ್ಲಿ 52 ಸಾವಿರ ಒಳಗೆ ಇದ್ದ ದರ, ಫೆಬ್ರವರಿಯಲ್ಲಿ ಮತ್ತೆ 53 ಸಾವಿರ ಗಡಿದಾಟಿತ್ತು. ಮಾರ್ಚ್ ಮೊದಲ ವಾರದಲ್ಲಿ ಸ್ವಲ್ಪ ಇಳಿಕೆಯಾಗಿದ್ದು, ತಿಂಗಳ ಕೊನೆಯಲ್ಲಿ ಮತ್ತೆ 53 ಸಾವಿರ ಗಡಿ ಮುಟ್ಟಿತ್ತು. ಮೇ ತಿಂಗಳಲ್ಲಿ 59,512 ರೂ.ಗೆ ಇಳಿದಿದ್ದು, ಜೂನ್ ಆರಂಭದಲ್ಲಿ 59,000 ರೂ. ಇದ್ದು ಕೊನೆಯಲ್ಲಿ 56,599 ರೂ. ಗೆ ಇಳಿಕೆಯಾಗಿತ್ತು. ಜುಲೈ ಮೊದಲ ವಾರ ಚೇತರಿಕೆ ಕಂಡು ಈಗ 58,099 ರೂ. ಆಗಿತ್ತು. ಆಗಸ್ಟ್ ಆರಂಭದಲ್ಲಿ ಸತತ ಏರಿಕೆ ಕಂಡು ಪ್ರಸ್ತುತ ಕ್ವಿಂಟಲ್ ಗೆ 60,500ರೂ. ತಲುಪಿದ್ದು, ಸತತವಾಗಿ ಬೆಲೆ ಏರಿಕೆ ಕಾಣುತ್ತಿದೆ. ಈ ಮೂಲಕ ಅಡಿಕೆ ದರ ಈ ವರ್ಷದಲ್ಲಿಯೇ ಗರಿಷ್ಠ ಬೆಲೆ ದಾಖಲಾಗಿದೆ. 2023 ಜುಲೈ ತಿಂಗಳಲ್ಲಿ ಗರಿಷ್ಠ ಬೆಲೆ 57 ಸಾವಿರ ತಲುಪಿತ್ತು. ಕಳೆದ ವರ್ಷ (2024) ಮೇ ತಿಂಗಳಲ್ಲಿ ಗರಿಷ್ಠ 55 ಸಾವಿರ ತಲುಪಿತ್ತು.



