ದಾವಣಗೆರೆ: ಅಡಿಕೆ ಬೆಲೆಯಲ್ಲಿ ತೀವ್ರ ಕುಸಿತ; ಜೂ‌.16ರ ಕನಿಷ್ಠ, ಗರಿಷ್ಠ ದರ ಎಷ್ಟಿದೆ..?

ದಾವಣಗೆರೆ: ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾದ ಅಡಿಕೆ ದರವು (arecanut rate) ತೀವ್ರ ಕುಸಿತ ಕಾಣುತ್ತಿದೆ. ಜೂನ್ ಆರಂಭದಿಂದಲೂ ದರ ಸತತ ಕುಸಿಯುತ್ತಿದೆ. ಹಿಂದಿನ ದಿನದ ಮಾರುಕಟ್ಟೆಗೆ ಹೋಲಿಸಿದ್ರೆ 1200 ರೂ‌ಗಳಷ್ಟು ಇವತ್ತು ( ಜೂ‌16) ದರ ಕುಸಿದಿದೆ. ಇಂದು ಗರಿಷ್ಠ ಬೆಲೆ ಪ್ರತಿ ಕ್ವಿಂಟಲ್ ಗೆ 57, 389 ರೂ.ಇದೆ.

ಜೂ.16ರ ಚನ್ನಗಿರಿ ರಾಶಿ ಅಡಿಕೆ ಧಾರಣೆ (ಪ್ರತಿ ಕ್ವಿಂಟಲ್ ದರ)

  • ಗರಿಷ್ಠ ಬೆಲೆ 57,389
  • ಕನಿಷ್ಠ ಬೆಲೆ 30,000
  • ಸರಾಸರಿ ಬೆಲೆ 50,152

ಬೆಟ್ಟೆ ಅಡಿಕೆ ದರ

  • ಗರಿಷ್ಠ ಬೆಲೆ 31,679
  • ಕನಿಷ್ಠ ಬೆಲೆ 27,527
  • ಸರಾಸರಿ ಬೆಲೆ 29,330

ಜಿಲ್ಲೆಯ ಪ್ರಮುಖ ಮಾರುಕಟ್ಟೆಯಾದ ಚನ್ನಗಿರಿ (Channagiri) ವಹಿವಾಟಿನಲ್ಲಿ‌ ಜೂ.16ರಂದು ರಾಶಿ ಅಡಿಕೆ ಗರಿಷ್ಠ‌ ಬೆಲೆ ಕ್ವಿಂಟಲ್ ಗೆ 57,389 ಇದ್ದು, ಕನಿಷ್ಠ ಬೆಲೆ 30,000 ರೂ., ಸರಾಸರಿ ಬೆಲೆ 50,0152 ರೂ.‌ಇದೆ.

ಜಿಲ್ಲೆಯ ಚನ್ನಗಿರಿ, ಹೊನ್ನಾಳಿ, ದಾವಣಗೆರೆ, ಹರಿಹರ, ಜಗಳೂರು ತಾಲ್ಲೂಕಿನಲ್ಲಿ ಅಡಿಕೆ ಮುಖ್ಯ ಬೆಳೆಯಾಗಿದೆ. ಜಿಲ್ಲೆಯಲ್ಲಿ ಉತ್ತಮವಾಗಿ ಮುಂಗಾರು ಮಳೆಯಾಗುತ್ತಿದ್ದು, ರೈತರಲ್ಲಿ ಸಂತಸ ತಂದಿದೆ.

2025ರ ಜನವರಿ ಕೊನೆಯಲ್ಲಿ 52 ಸಾವಿರ ಒಳಗೆ ಇದ್ದ ದರ, ಫೆಬ್ರವರಿಯಲ್ಲಿ ಮತ್ತೆ 53 ಸಾವಿರ ಗಡಿದಾಟಿತ್ತು. ಮಾರ್ಚ್ ಮೊದಲ ವಾರದಲ್ಲಿ ಸ್ವಲ್ಪ ಇಳಿಕೆಯಾಗಿದ್ದು, ತಿಂಗಳ ಕೊನೆಯಲ್ಲಿ ಮತ್ತೆ 53 ಸಾವಿರ ಗಡಿ ಮುಟ್ಟಿತ್ತು. ಏಪ್ರಿಲ್ 23ರಂದು ಗರಿಷ್ಠ ಬೆಲೆ 60,669 ರೂ. ಇತ್ತು. ಮೇ ತಿಂಗಳ 59,512 ರೂ.ಗೆ ಇಳಿದಿದ್ದು, ಜೂನ್ ಆರಂಭದಲ್ಲಿ 59,000 ರೂ. ಇದ್ದು, ಈಗ ಮತ್ತಷ್ಟು ದರ ಕಡಿತವಾಗಿ 57,389 ರೂ. ಗೆ ಇಳಿಕೆಯಾಗಿದೆ. 2023 ಜುಲೈ ತಿಂಗಳಲ್ಲಿ ಗರಿಷ್ಠ ಬೆಲೆ 57 ಸಾವಿರ ತಲುಪಿತ್ತು. ಕಳೆದ ವರ್ಷ (2024) ಮೇ ತಿಂಗಳಲ್ಲಿ ಗರಿಷ್ಠ 55 ಸಾವಿರ ತಲುಪಿತ್ತು.

Dvgsuddi: ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com
Recent Posts