ದಾವಣಗೆರೆ: ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾದ ಅಡಿಕೆ ದರವು (arecanut rate) ತಿಂಗಳ ಕೊನೆಯಲ್ಲಿ ಮತ್ತೆ ಇಳಿಕೆ ಕಂಡಿದೆ. ಏ.23 ರಂದು ಗರಿಷ್ಠ 60,669 ರೂ. ಇದ್ದ ಬೆಲೆ ಏಕಾಏಕಿ 3 ಸಾವಿರ ಕುಸಿತ ಕಂಡಿದೆ. ಇಂದು (ಏ.28) ಗರಿಷ್ಠ ಬೆಲೆ ಪ್ರತಿ ಕ್ವಿಂಟಲ್ ಗೆ 58,600ರೂ.ಗೆ ಕುಸಿದಿದೆ.
ಏ.28 ಚನ್ನಗಿರಿ ರಾಶಿ ಅಡಿಕೆ ಧಾರಣೆ (ಪ್ರತಿ ಕ್ವಿಂಟಲ್ ದರ)
- ಗರಿಷ್ಠ ಬೆಲೆ 58,600
- ಕನಿಷ್ಠ ಬೆಲೆ 53,689
- ಸರಾಸರಿ ಬೆಲೆ 56,399
ಬೆಟ್ಟೆ ಅಡಿಕೆ ದರ
- ಗರಿಷ್ಠ ಬೆಲೆ 31,100
- ಕನಿಷ್ಠ ಬೆಲೆ 30,269
- ಸರಾಸರಿ ಬೆಲೆ 30,823
ಜಿಲ್ಲೆಯ ಪ್ರಮುಖ ಮಾರುಕಟ್ಟೆಯಾದ ಚನ್ನಗಿರಿ (Channagiri) ವಹಿವಾಟಿನಲ್ಲಿ ಏ.28ರಂದು ರಾಶಿ ಅಡಿಕೆ ಗರಿಷ್ಠ ಬೆಲೆ ಕ್ವಿಂಟಲ್ ಗೆ 58,600 ಇದ್ದು, ಕನಿಷ್ಠ ಬೆಲೆ 53,689 ರೂ., ಸರಾಸರಿ ಬೆಲೆ 56,399 ರೂ.ಇದೆ.
ಹೆಚ್ಚಿದ ಬಿಸಿಲಿನ ತಾಪಮಾನ
ಜಿಲ್ಲೆಯ ಚನ್ನಗಿರಿ, ಹೊನ್ನಾಳಿ, ದಾವಣಗೆರೆ, ಹರಿಹರ, ಜಗಳೂರು ತಾಲ್ಲೂಕಿನಲ್ಲಿ ಅಡಿಕೆ ಮುಖ್ಯ ಬೆಳೆಯಾಗಿದೆ. ಜಿಲ್ಲೆಯಲ್ಲಿ ಬಿಸಿಲಿನ ತಾಪಮಾನ ಗರಿಷ್ಠ ಮಟ್ಟಕ್ಕೆ ಏರಿಕೆಯಾಗುತ್ತಿದೆ. ಬಿಸಿಲಿನ ತಾಪಮಾನ ಹೆಚ್ಚಳದಿಂದ ಅಡಿಕೆಗೆ ಎಲೆಚುಕ್ಕಿ ರೋಗ, ಹಳದಿ ಎಲೆ ರೋಗ ಸೇರಿದಂತೆ ಹಲವು ರೋಗಗಳು ಕಾಣಿಸಿಕೊಳ್ಳುತ್ತಿವೆ. ಹೀಗಾಗಿ ಅಡಿಕೆ ತೋಟಗಳ ರಕ್ಷಣೆಗೆ ರೈತರು ಮುಂಜಾಗ್ರತಾ ಕ್ರಮಕೈಗೊಳ್ಳಬೇಕಿದೆ.
ಕಳೆದ ಎರಡು ವರ್ಷಗಳ ಗರಿಷ್ಠ ಬೆಲೆ ಎಷ್ಟು..?
ಜನವರಿ ಕೊನೆಯಲ್ಲಿ 52 ಸಾವಿರ ಒಳಗೆ ಇದ್ದ ದರ, ಫೆಬ್ರವರಿಯಲ್ಲಿ ಮತ್ತೆ 53 ಸಾವಿರ ಗಡಿ ದಾಟಿತ್ತು. ಮಾರ್ಚ್ ಮೊದಲ ವಾರದಲ್ಲಿ ಸ್ವಲ್ಪ ಇಳಿಕೆಯಾಗಿದ್ದು, ತಿಂಗಳ ಕೊನೆಯಲ್ಲಿ ಮತ್ತೆ 53 ಸಾವಿರ ಗಡಿ ಮುಟ್ಟಿತ್ತು. ಏಪ್ರಿಲ್ ತಿಂಗಳಲ್ಲಿ 23ರಂದು ಗರಿಷ್ಠ ಬೆಲೆ 60,669 ರೂ. ಇತ್ತು. ತಿಂಗಳ ಕೊನೆಯಲ್ಲಿ 59 ಸಾವಿರ ಒಳ್ಎ ಬಂದಿದೆ. 2023 ಜುಲೈ ತಿಂಗಳಲ್ಲಿ ಗರಿಷ್ಠ ಬೆಲೆ 57 ಸಾವಿರ ತಲುಪಿತ್ತು. ಕಳೆದ ವರ್ಷ (2024) ಮೇ ತಿಂಗಳಲ್ಲಿ ಗರಿಷ್ಠ 55 ಸಾವಿರ ತಲುಪಿತ್ತು.