ದಾವಣಗೆರೆ: ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾದ ಅಡಿಕೆ ದರವು (arecanut rate) ಭರ್ಜರಿ ಏರಿಕೆ ಕಂಡಿದೆ. ಕಳೆದ 18 ದಿನದಲ್ಲಿ 5 ಸಾವಿರದಷ್ಟು ದರ ಏರಿಕೆಯಾಗಿದೆ. ಇಂದು (ಏ.18) ಗರಿಷ್ಠ ಬೆಲೆ 58,669 ರೂ.ಗೆ ಏರಿಕೆಯಾಗಿದೆ. ಇದೇ ರೀತಿ ಬೆಲೆ ಏರಿಕೆ ಮುಂದುವರೆದ್ರೆ 60 ಸಾವಿರ ದಾಟಿದರೂ ಅಚ್ಚರಿಪಡಬೇಕಿಲ್ಲ. ಈ ದರ ಏರಿಕೆಯಿಂದ ರೈತರ ಮುಖದಲ್ಲಿ ಸಂತಸ ತಂದಿದೆ.
- ಏ.18ರ ಚನ್ನಗಿರಿ ರಾಶಿ ಅಡಿಕೆ ಧಾರಣೆ (ಪ್ರತಿ ಕ್ವಿಂಟಲ್ ದರ)
- ಗರಿಷ್ಠ ಬೆಲೆ 58,669
- ಕನಿಷ್ಠ ಬೆಲೆ 55,469
- ಸರಾಸರಿ ಬೆಲೆ 57,272
- ಬೆಟ್ಟೆ ಅಡಿಕೆ ದರ
- ಗರಿಷ್ಠ ಬೆಲೆ 43,789
- ಕನಿಷ್ಠ ಬೆಲೆ 24,779
- ಸರಾಸರಿ ಬೆಲೆ 31,222
ಜಿಲ್ಲೆಯ ಪ್ರಮುಖ ಮಾರುಕಟ್ಟೆಯಾದ ಚನ್ನಗಿರಿ (Channagiri) ವಹಿವಾಟಿನಲ್ಲಿ ಏ.18ರಂದು ರಾಶಿ ಅಡಿಕೆ ಗರಿಷ್ಠ ಬೆಲೆ ಕ್ವಿಂಟಲ್ ಗೆ 58,669 ಇದ್ದು, ಕನಿಷ್ಠ ಬೆಲೆ 55,469 ರೂ., ಸರಾಸರಿ ಬೆಲೆ 57,272 ರೂ.ಇದೆ.
ಜಿಲ್ಲೆಯ ಚನ್ನಗಿರಿ, ಹೊನ್ನಾಳಿ, ದಾವಣಗೆರೆ, ಹರಿಹರ, ಜಗಳೂರು ತಾಲ್ಲೂಕಿನಲ್ಲಿ ಅಡಿಕೆ ಮುಖ್ಯ ಬೆಳೆಯಾಗಿದೆ. ದಿನದಿಂದ ದಿನಕ್ಕೆ ಬಿಸಿಲಿನ ತಾಪಮಾನ ಏರಿಕೆಯಾಗುತ್ತಿದೆ. ಅದರಲ್ಲೂ ಏಪ್ರಿಲ್ ನಲ್ಲಿ ಬಿಸಿಲು ಗರಿಷ್ಠಮಟ್ಟ ತಲುಪಿದೆ. ಬಿಸಿಲಿನ ತಾಪಮಾನ ಹೆಚ್ಚಳದಿಂದ ಅಡಿಕೆಗೆ ಹಲವು ರೋಗಗಳು ಕಾಣಿಸಿಕೊಳ್ಳುತ್ತಿವೆ. ಹೀಗಾಗಿ ಅಡಿಕೆ ತೋಟಗಳ ರಕ್ಷಣೆಗೆ ರೈತರು ಮುಂಜಾಗ್ರತಾ ಕ್ರಮಕೈಗೊಳ್ಳಬೇಕಿದೆ.
ಜನವರಿ ಕೊನೆಯಲ್ಲಿ 52 ಸಾವಿರ ಒಳಗೆ ಇದ್ದ ದರ, ಫೆಬ್ರವರಿಯಲ್ಲಿ ಮತ್ತೆ 53 ಸಾವಿರ ಗಡಿ ದಾಟಿತ್ತು. ಮಾರ್ಚ್ ಮೊದಲ ವಾರದಲ್ಲಿ ಸ್ವಲ್ಪ ಇಳಿಕೆಯಾಗಿದ್ದು, ತಿಂಗಳ ಕೊನೆಯಲ್ಲಿ ಮತ್ತೆ 53 ಸಾವಿರ ಗಡಿ ದಾಟಿತ್ತು. ಇದೀಗ ಏಪ್ರಿಲ್ ನಲ್ಲಿ 58 ಸಾವಿರಕ್ಕೆ ಏರಿಕೆಯಾಗಿದೆ. 2023 ಜುಲೈ ತಿಂಗಳಲ್ಲಿ ಗರಿಷ್ಠ ಬೆಲೆ 57 ಸಾವಿರ ತಲುಪಿತ್ತು. ಕಳೆದ ವರ್ಷ (2024) ಮೇ ತಿಂಗಳಲ್ಲಿ ಗರಿಷ್ಠ 55 ಸಾವಿರ ತಲುಪಿತ್ತು.



