ದಾವಣಗೆರೆ: ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾದ ಅಡಿಕೆ ದರಲ್ಲಿ (arecanut rate) ಸತತ ಇಳಿಕೆ ಚೇತರಿಕೆ ಹಾದಿ ಹಿಡಿದೆ. ಒಂದು ವಾರದಿಂದ ಕುಸಿತ ಕಂಡಿದ್ದ ಅಡಿಕೆ ಬೆಲೆ ಇಂದು(23) 50 ರೂಪಾಯಿಯಷ್ಟು ಚೇತರಿಕೆ ಕಂಡಿದೆ. .
- ಡಿ.23 ಚನ್ನಗಿರಿ ರಾಶಿ ಅಡಿಕೆ ಧಾರಣೆ (ಪ್ರತಿ ಕ್ವಿಂಟಲ್ ದರ)
- ಗರಿಷ್ಠ ಬೆಲೆ 50,929
- ಕನಿಷ್ಠ ಬೆಲೆ 39,000
- ಸರಾಸರಿ ಬೆಲೆ 48,545
ಜಿಲ್ಲೆಯ ಚನ್ನಗಿರಿ, ಹೊನ್ನಾಳಿ, ದಾವಣಗೆರೆ, ಹರಿಹರ, ಜಗಳೂರು ತಾಲ್ಲೂಕಿನಲ್ಲಿ ಅಡಿಕೆ ಮುಖ್ಯ ಬೆಳೆಯಾಗಿದೆ. ಪ್ರತಿ ವರ್ಷಕ್ಕೆ ಹೋಲಿಸಿದ್ರೆ ಈ ವರ್ಷ ಸ್ವಲ್ಪ ಇಳುವರಿ ಕಡಿಮೆ. ಏಕೆಂದ್ರೆ ಕಳೆದ ವರ್ಷದ ತೀವ್ರ ಮಳೆ ಕೊರತೆಯಿಂದ ಉಷ್ಣಾಂಶ ಏರಿಕೆಯಾಗಿ ಇಳುವರಿ ಕುಸಿತ ಕಂಡಿದೆ. ಇಂದು (ಡಿ.23) ಜಿಲ್ಲೆಯ ಪ್ರಮುಖ ಮಾರುಕಟ್ಟೆಯಾದ ಚನ್ನಗಿರಿ ವಹಿವಾಟಿನಲ್ಲಿ ರಾಶಿ ಅಡಿಕೆ ಗರಿಷ್ಠ ಬೆಲೆ ಕ್ವಿಂಟಲ್ ಗೆ 50,929 ರೂ. ಇದ್ದು, ಕನಿಷ್ಠ ಬೆಲೆ 39,000 ರೂ., ಸರಾಸರಿ ಬೆಲೆ 48,545 ರೂ.ಇದೆ. ಬೆಟ್ಟೆ ಅಡಿಕೆ ಗರಿಷ್ಠ 28,536 ರೂ. ದಾಖಲಾಗಿದೆ.
ಜೂನ್ ಮೊದಲ ವಾರ 54 ಸಾವಿರ ಗಡಿ ದಾಟಿದ್ದ ಬೆಲೆ, ಜೂ.20ರಿಂದ ದಿನದಿಂದ ದಿನಕ್ಕೆ ಕುಸಿಯುತ್ತ ಬಂದಿದ್ದು, ಸೆಪ್ಟೆಂಬರ್ ನಲ್ಲಿ ಹೊಸ ಅಡಿಕೆ 46 ಸಾವಿರ ಗಡಿ ತಲುಪಿತ್ತು. ಅಕ್ಟೋಬರ್ ಪ್ರಾರಂಭದಲ್ಲಿ ಚೇತರಿಕೆ ಕಂಡು 50 ಸಾವಿರ ಗಡಿ ಸಮೀಪ ಬಂದಿತ್ತು. ನವೆಂಬರ್ ಮೊದಲ ವಾರ ಕುಸಿದು ಕೊನೆಯಲ್ಲಿ 50 ಸಾವಿರ ಗಡಿ ತಲುಪಿತ್ತು. ಈಗ ಡಿಸೆಂಬರ್ ನಲ್ಲಿ 51 ಸಾವಿರ ಗಡಿದಾಟಿ, ಕಳೆದ ಒಂದು ವಾರದಿಂದ ಕುಸಿತ ಬಳಿಕ ಈಗ ಚೇತರಿಕೆ ಕಾಣುತ್ತಿದೆ. ಕಳೆದ ವರ್ಷ (2023) ಜುಲೈ ತಿಂಗಳಲ್ಲಿ ಗರಿಷ್ಠ ಬೆಲೆ 57 ಸಾವಿರ ತಲುಪಿತ್ತು. ಈ ವರ್ಷ ಮೇ ತಿಂಗಳಲ್ಲಿ ಗರಿಷ್ಠ 55 ಸಾವಿರ ತಲುಪಿ ನಂತರ ಕುಸಿದಿತ್ತು.



