Connect with us

Dvgsuddi Kannada | online news portal | Kannada news online

ದಾವಣಗೆರೆ: ಆ.28ರ ರಾಶಿ ಅಡಿಕೆ ಧಾರಣೆ; ಏರಿದ ಹೊಸ ಅಡಿಕೆ ದರ, ಇಳಿದ ಹಳೆ ಅಡಿಕೆ ಬೆಲೆ..!! ಇಲ್ಲಿದೆ ಸಂಪೂರ್ಣ ಮಾಹಿತಿ

ದಾವಣಗೆರೆ

ದಾವಣಗೆರೆ: ಆ.28ರ ರಾಶಿ ಅಡಿಕೆ ಧಾರಣೆ; ಏರಿದ ಹೊಸ ಅಡಿಕೆ ದರ, ಇಳಿದ ಹಳೆ ಅಡಿಕೆ ಬೆಲೆ..!! ಇಲ್ಲಿದೆ ಸಂಪೂರ್ಣ ಮಾಹಿತಿ

ದಾವಣಗೆರೆ: ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾದ ಅಡಿಕೆ ದರ (arecanut rate) ತೀವ್ರ ಕುಸಿತ ಬಳಿಕ ರೈತರ ಮುಖದಲ್ಲಿ ಸಂತಸ ತಂದಿದೆ.‌ ಇಂದಿನ (ಆ.26) ದಾವಣಗೆರೆ (ಚನ್ನಗಿರಿ) ರಾಶಿ ಅಡಿಕೆ ಧಾರಣೆಯಲ್ಲಿ ಹೊಸ ಅಡಿಕೆ‌ ದರ ಒಂದು ಸಾವಿರದಷ್ಟು ಏರಿಕೆ ಕಂಡಿದ್ದು, ಹಳೆ ಅಡಿಕೆ ದರ ಸ್ವಲ್ಪ ಕುಸಿತ ಕಂಡಿದೆ.

ಇಂದು ಗರಿಷ್ಠ‌ ಬೆಲೆ ಕ್ವಿಂಟಲ್ ಗೆ (ಹಳೆದು) 48,195 ರೂ., ಕನಿಷ್ಠ ಬೆಲೆ 36,599 ರೂ.ಗಳಾಗಿದೆ. ಇನ್ನೂ ಹೊಸ ಅಡಿಕೆ ಗರಿಷ್ಠ ದರ 43,599 ರೂ, ಕನಿಷ್ಠ 35,800 ರೂ. ಇದೆ. ಜೂನ್ ಮೊದಲ ವಾರ 54 ಸಾವಿರ ಗಡಿ ದಾಟಿದ್ದ ಬೆಲೆ, ಜೂ.20ರಿಂದ ಜುಲೈ, ಆಗಷ್ಟು ಕೊನೆ ವಾರದ ವರೆಗೂ ದಿನದಿಂದ ದಿನಕ್ಕೆ ಕುಸಿಯುತ್ತಲೇ ಬಂದಿದೆ.

ಈ ಬಾರಿಯ ಉತ್ತಮ ಮುಂಗಾರು ಕೃಪೆಯಿಂದ ಜಿಲ್ಲೆಯ ರೈತರ ಜೀವನಾಡಿ ಭದ್ರಾ ಜಲಾಶಯ ತುಂಬಿದ್ದು, ಅಡಿಕೆ ಬೆಳೆಗೆ ಬೇಸಿಗೆಯಲ್ಲಿ ನೀರು ಸಿಗುವ ಖಾತ್ರಿಯಾಗಿದೆ. ಕಳೆದ ವರ್ಷ (2023) ಜುಲೈ ತಿಂಗಳಲ್ಲಿ ಗರಿಷ್ಠ ಬೆಲೆ 57 ಸಾವಿರ ತಲುಪಿತ್ತು. ಈ ವರ್ಷ ಮೇ ತಿಂಗಳಲ್ಲಿ ಗರಿಷ್ಠ ಈಗ 55 ಸಾವಿರ ತಲುಪಿತ್ತು. ಹೀಗಾಗಿ ಇನ್ಮುಂದೆ ಒಳ್ಳೆ ರೇಟ್ ಸಿಗುವ ಸಾಧ್ಯತೆ ಕಡಿಮೆ. ಯಾಕೆಂದರೆ ಮಾರುಕಟ್ಟೆಗೆ ಹೊಸ ಅಡಿಕೆ ಬಂದಿದೆ. ಹೀಗಾಗಿ ಇದೇ ಒಳ್ಳೆ ರೇಟ್ ಎಂದುಕೊಂಡು ಮಾರಾಟ ಮಾಡುವುದು ಉತ್ತಮ. ಜಿಲ್ಲೆಯಲ್ಲಿ ಈ ವರ್ಷ ಮುಂಗಾರು ಮಳೆ ಉತ್ತಮವಾಗುತ್ತಿದೆ.

ಕಳೆದ ಬಾರಿಯ ತೀವ್ರ ಬರದಿಂದ ಬೋರ್ ವೆಲ್ ಗಳಲ್ಲಿ ಅಂತರ್ಜಲ ಮಟ್ಟ ತೀವ್ರ ಕುಸಿದಿತ್ತು. ಈಗ ಜೋರು ಮಳೆಯಿಂದ ಬೋರ್ ವೆಲ್ ಗಳು ಚೇತರಿಕೆ ಕಾಣುತ್ತಿವೆ. ಈ ವರ್ಷ ವಾಡಿಕೆಗಿಂತ ಹೆಚ್ಚು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

2024 ಜನವರಿ 15ರಂದು ರಾಶಿ ಅಡಿಕೆ ಗರಿಷ್ಠ ದರ 50,500 ರೂಪಾಯಿ ಗಡಿ ತಲುಪಿತ್ತು. ಫೆಬ್ರವರಿ ತಿಂಗಳಲ್ಲಿ‌ ಏಕಾಏಕಿ 48 ಸಾವಿರಕ್ಕೆ ಕುಸಿದಿತ್ತು. ಮಾರ್ಚ್ ತಿಂಗಳಲ್ಲಿ ಸ್ವಲ್ಪ ಚೇತರಿಕೆ ಕಂಡು 50 ಸಾವಿರ ತಲುಪಿತ್ತು. ಏಪ್ರಿಲ್ ನಲ್ಲಿ ಗರಿಷ್ಠ 54 ಸಾವಿರ ಗಡಿ ತಲುಪಿತ್ತು. ಮೇ ತಿಂಗಳಲ್ಲಿ ಗರಿಷ್ಠ 55 ಸಾವಿರ ತಲುಪಿ, ಕುಸಿತ ಕಂಡಿತ್ತು. ಜೂನ್ ತಿಂಗಳ ಎರಡನೇ ವಾರದಿಂದ ಮತ್ತೆ ಕುಸಿತ ಕಂಡು, ಜುಲೈನಲ್ಲಿ 51 ಸಾವಿರ ಇತ್ತು. ಆಗಸ್ಟ್ ನಲ್ಲಿ ಹೊಸ ಅಡಿಕೆ 42 ಸಾವಿರಕ್ಕೆ ಕುಸಿದಿದೆ.

ಜಿಲ್ಲೆಯ ಪ್ರಮುಖ ಮಾರುಕಟ್ಟೆಯಾದ ಚನ್ನಗಿರಿ ವಹಿವಾಟಿನಲ್ಲಿ ಆ.236ರಂದು ಪ್ರತಿ ಕ್ವಿಂಟಾಲ್ ಉತ್ತಮ ರಾಶಿ ಅಡಿಕೆ ಕನಿಷ್ಠ ಬೆಲೆ (ಹೊಸದು) 35,800 ರೂ., ಗರಿಷ್ಠ ಬೆಲೆ 43,599 ಹಾಗೂ ಸರಾಸರಿ ಬೆಲೆ 39,911 ರೂ.ಗೆ ಮಾರಾಟವಾಗಿದೆ. ಹಳೆ ಅಡಿಕೆ ಗರಿಷ್ಠ 48,195 ರೂ., ಕನಿಷ್ಠ 36,599 ಹಾಗೂ ಸರಾಸರಿ ಬೆಲೆ 45,939 ರೂ. ಇದೆ.

 

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top