Connect with us

Dvgsuddi Kannada | online news portal | Kannada news online

ದಾವಣಗೆರೆ: ಆ.21ರ ಅಡಿಕೆ ಧಾರಣೆ; 42 ಸಾವಿರಕ್ಕೆ ಕುಸಿದ ಹೊಸ ಅಡಿಕೆ ದರ; ಹಳೆ ಅಡಿಕೆ ಬೆಲೆ ಎಷ್ಟಿದೆ…?

ದಾವಣಗೆರೆ

ದಾವಣಗೆರೆ: ಆ.21ರ ಅಡಿಕೆ ಧಾರಣೆ; 42 ಸಾವಿರಕ್ಕೆ ಕುಸಿದ ಹೊಸ ಅಡಿಕೆ ದರ; ಹಳೆ ಅಡಿಕೆ ಬೆಲೆ ಎಷ್ಟಿದೆ…?

ದಾವಣಗೆರೆ: ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾದ ಅಡಿಕೆ ದರ (arecanut rate) ತೀವ್ರ ಕುಸಿತ ಕಂಡಿದೆ.‌ ಇಂದು (ಆ.21) ರಾಶಿ ಅಡಿಕೆ ಧಾರಣೆಯಲ್ಲಿ ಗರಿಷ್ಠ‌ ಬೆಲೆ ಕ್ವಿಂಟಲ್ ಗೆ ( ಹಳೆದು) 48,600 ರೂ.ಗೆ ಕುಸಿದಿದೆ.‌ ಕನಿಷ್ಠ ಬೆಲೆ 38,599 ರೂ.ಗಳಾಗಿದೆ. ಇನ್ನೂ ಹೊಸ ಅಡಿಕೆ ದರ ಮತ್ತಷ್ಟು ಇಳಿಕೆ ಕಂಡಿದೆ. ಗರಿಷ್ಠ 42,500 ರೂ, ಕನಿಷ್ಠ 38,200 ರೂ. ಇದೆ.

ಜೂನ್ ಮೊದಲ ವಾರ 54 ಸಾವಿರ ಗಡಿ ದಾಟಿದ್ದ ಬೆಲೆ, ಜೂ.20ರಿಂದ ದಿನದಿಂದ ದಿನಕ್ಕೆ ಕುಸಿಯುತ್ತಲೇ ಬಂದಿತ್ತು. ಈ ಬಾರಿಯ ಉತ್ತಮ ಮುಂಗಾರು ಕೃಪೆಯಿಂದ ಜಿಲ್ಲೆಯ ರೈತರ ಜೀವನಾಡಿ ಭದ್ರಾ ಜಲಾಶಯ ತುಂಬಿದ್ದು, ಅಡಿಕೆ ಬೆಳೆಗೆ ಬೇಸಿಗೆಯಲ್ಲಿ ನೀರು ಸಿಗುವ ಖಾತ್ರಿಯಾಗಿದೆ. ಕಳೆದ ವರ್ಷ (2023) ಜುಲೈ ತಿಂಗಳಲ್ಲಿ ಗರಿಷ್ಠ ಬೆಲೆ 57 ಸಾವಿರ ತಲುಪಿತ್ತು. ಈ ವರ್ಷ ಮೇ ತಿಂಗಳಲ್ಲಿ ಗರಿಷ್ಠ ಈಗ 55 ಸಾವಿರ ತಲುಪಿತ್ತು. ಹೀಗಾಗಿ ಇನ್ಮುಂದೆ ಒಳ್ಳೆ ರೇಟ್ ಸಿಗುವ ಸಾಧ್ಯತೆ ಕಡಿಮೆ. ಯಾಕೆಂದರೆ ಮಾರುಕಟ್ಟೆಗೆ ಹೊಸ ಅಡಿಕೆ ಬಂದಿದೆ. ಹೀಗಾಗಿ ಇದೇ ಒಳ್ಳೆ ರೇಟ್ ಎಂದುಕೊಂಡು ಮಾರಾಟ ಮಾಡುವುದು ಉತ್ತಮ. ಜಿಲ್ಲೆಯಲ್ಲಿ ಈ ವರ್ಷ ಮುಂಗಾರು ಮಳೆ ಉತ್ತಮವಾಗುತ್ತಿದೆ.

ಕಳೆದ ಬಾರಿಯ ತೀವ್ರ ಬರದಿಂದ ಬೋರ್ ವೆಲ್ ಗಳಲ್ಲಿ ಅಂತರ್ಜಲ ಮಟ್ಟ ತೀವ್ರ ಕುಸಿದಿತ್ತು. ಈಗ ಜೋರು ಮಳೆಯಿಂದ ಬೋರ್ ವೆಲ್ ಗಳು ಚೇತರಿಕೆ ಕಾಣುತ್ತಿವೆ. ಈ ವರ್ಷ ವಾಡಿಕೆಗಿಂತ ಹೆಚ್ಚು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

2024 ಜನವರಿ 15ರಂದು ರಾಶಿ ಅಡಿಕೆ ಗರಿಷ್ಠ ದರ 50,500 ರೂಪಾಯಿ ಗಡಿ ತಲುಪಿತ್ತು. ಫೆಬ್ರವರಿ ತಿಂಗಳಲ್ಲಿ‌ ಏಕಾಏಕಿ 48 ಸಾವಿರಕ್ಕೆ ಕುಸಿದಿತ್ತು. ಮಾರ್ಚ್ ತಿಂಗಳಲ್ಲಿ ಸ್ವಲ್ಪ ಚೇತರಿಕೆ ಕಂಡು 50 ಸಾವಿರ ತಲುಪಿತ್ತು. ಏಪ್ರಿಲ್ ನಲ್ಲಿ ಗರಿಷ್ಠ 54 ಸಾವಿರ ಗಡಿ ತಲುಪಿತ್ತು. ಮೇ ತಿಂಗಳಲ್ಲಿ ಗರಿಷ್ಠ 55 ಸಾವಿರ ತಲುಪಿ, ಕುಸಿತ ಕಂಡಿತ್ತು. ಜೂನ್ ತಿಂಗಳ ಎರಡನೇ ವಾರದಿಂದ ಮತ್ತೆ ಕುಸಿತ ಕಂಡು, ಜುಲೈನಲ್ಲಿ 51 ಸಾವಿರ ಇತ್ತು. ಆಗಸ್ಟ್ ನಲ್ಲಿ ಹೊಸ ಅಡಿಕೆ 42 ಸಾವಿರಕ್ಕೆ ಕುದಿಸಿದೆ.

ಜಿಲ್ಲೆಯ ಪ್ರಮುಖ ಮಾರುಕಟ್ಟೆಯಾದ ಚನ್ನಗಿರಿ ವಹಿವಾಟಿನಲ್ಲಿ ಆ.21ರಂದು ಪ್ರತಿ ಕ್ವಿಂಟಾಲ್ ಉತ್ತಮ ರಾಶಿ ಅಡಿಕೆ ಕನಿಷ್ಠ ಬೆಲೆ (ಹೊಸದು) 38,599 ರೂ., ಗರಿಷ್ಠ ಬೆಲೆ 48,600 ಹಾಗೂ ಸರಾಸರಿ ಬೆಲೆ 46,007 ರೂ.ಗೆ ಮಾರಾಟವಾಗಿದೆ. ಹೊಸ ಅಡಿಕೆ ಗರಿಷ್ಠ 42,500 ರೂ., ಕನಿಷ್ಠ 38,600 ಹಾಗೂ ಸರಾಸರಿ ಬೆಲೆ 39,419 ರೂ ಇದೆ.

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top