Connect with us

Dvgsuddi Kannada | online news portal | Kannada news online

ದಾವಣಗೆರೆ: ಅಡಿಕೆಗೆ ಮತ್ತೆ ಬಂಪರ್ ಬೆಲೆ; ಜೂ.3ರ ರಾಶಿ ಅಡಿಕೆ ಧಾರಣೆಯ ಕನಿಷ್ಠ, ಗರಿಷ್ಠ ಬೆಲೆ ಎಷ್ಟಿದೆ..?

ಪ್ರಮುಖ ಸುದ್ದಿ

ದಾವಣಗೆರೆ: ಅಡಿಕೆಗೆ ಮತ್ತೆ ಬಂಪರ್ ಬೆಲೆ; ಜೂ.3ರ ರಾಶಿ ಅಡಿಕೆ ಧಾರಣೆಯ ಕನಿಷ್ಠ, ಗರಿಷ್ಠ ಬೆಲೆ ಎಷ್ಟಿದೆ..?

ದಾವಣಗೆರೆ: ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾದ ಅಡಿಕೆ ದರಕ್ಕೆ (arecanut rate) ಮತ್ತೆ ಬಂಪರ್ ಬೆಲೆ ಬಂದಿದೆ. ಪ್ರತಿ ಕ್ವಿಂಟಾಲ್ ಗೆ 55 ಸಾವಿರ ಗಡಿಯತ್ತ ಮುನ್ನುಗ್ಗುತ್ತಿದೆ. ಇಂದು (ಜೂ.03) ಗರಿಷ್ಠ‌ ಬೆಲೆ ಕ್ವಿಂಟಲ್ ಗೆ 54,475 ರೂ.ಗಳಿದ್ದು, ಕನಿಷ್ಠ ಬೆಲೆ 51,500 ರೂ.ಗಳಾಗಿದೆ. ಕಳೆದ ತಿಂಗಳು ಮೇ 13 ರಂದು ಗರಿಷ್ಠ 55 ಸಾವಿರ ಗಡಿ ದಾಟಿ ಕುಸಿದಿತ್ತು. ಇದೀಗ ಜೂನ್ ತಿಂಗಳ ಮೊದಲ ವಾರವೇ ಭರ್ಜರಿ ಬೆಲೆ ಇದೆ.

ಕಳೆದ ವರ್ಷ (2023) ಜುಲೈ ತಿಂಗಳಲ್ಲಿ ಗರಿಷ್ಠ ಬೆಲೆ 57 ಸಾವಿರ ತಲುಪಿತ್ತು. ಹೀಗಾಗಿ ಇನ್ನೂ ಸ್ವಲ್ಪ‌ ದಿನ ಇಟ್ಟು ಮಾರಾಟ ಮಾಡುವವರಿಗೆ‌ ಒಳ್ಳೆಯ ರೇಟ್ ಸಿಗುವ ಸಾಧ್ಯತೆ ಇದೆ. ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದ್ದು, ಬಿಸಿ ಗಾಳಿಯ ಅಲೆ ತಗ್ಗಿದೆ. ಕಳೆದ ಬಾರಿಯ ತೀವ್ರ ಬರದಿಂದ ಬೋರ್ ವೆಲ್ ಗಳಲ್ಲಿ ಅಂತರ್ಜಲ ಮಟ್ಟ ತೀವ್ರ ಕುಸಿದಿತ್ತು. ಇದೀಗ ಪೂರ್ವ ಮುಂಗಾರು ಮಳೆ ಉತ್ತಮವಾಗುತ್ತಿದ್ದು, ಈ ವರ್ಷ ವಾಡಿಕೆಗಿಂತ ಹೆಚ್ಚು ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದ್ದು, ಅಡಿಕೆ ಬೆಳೆ ರೈತರಲ್ಲಿ ಸಂತಸ ಮೂಡಿಸಿದೆ.

2024 ಜನವರಿ 15ರಂದು ರಾಶಿ ಅಡಿಕೆ ಗರಿಷ್ಠ ದರ 50,500 ರೂಪಾಯಿ ಗಡಿ ತಲುಪಿತ್ತು. ಫೆಬ್ರವರಿ ತಿಂಗಳಲ್ಲಿ‌ ಏಕಾಏಕಿ 48 ಸಾವಿರಕ್ಕೆ ಕುಸಿದಿತ್ತು. ಮಾರ್ಚ್ ತಿಂಗಳಳಲ್ಲಿ ಸ್ವಲ್ಪ ಚೇತರಿಕೆ ಕಂಡು 50 ಸಾವಿರ ತಲುಪಿತ್ತು. ಈಗ ಏಪ್ರಿಲ್ ನಲ್ಲಿ ಗರಿಷ್ಠ 54 ಸಾವಿರ ಗಡಿ ತಲುಪಿತ್ತು. ಮೇ ತಿಂಗಳಲ್ಲಿ ಗರಿಷ್ಠ ಈಗ 55 ಸಾವಿರ ತಲುಪಿ ಕುಸಿತ ಕಂಡಿತ್ತು. ಜೂನ್ ತಿಂಗಳಲ್ಲಿ ಮತ್ತೆ ಚೇತರಿಕೆ ಕಂಡಿದೆ.

ಜಿಲ್ಲೆಯ ಪ್ರಮುಖ ಮಾರುಕಟ್ಟೆಯಾದ ಚನ್ನಗಿರಿ ವಹಿವಾಟಿನಲ್ಲಿ ಜೂ.03ರಂದು ಪ್ರತಿ ಕ್ವಿಂಟಲ್ ಉತ್ತಮ ರಾಶಿ ಅಡಿಕೆ ಕನಿಷ್ಠ ಬೆಲೆ 51,500 ರೂ., ಗರಿಷ್ಠ ಬೆಲೆ 54,485 ಹಾಗೂ ಸರಾಸರಿ ಬೆಲೆ 53,389ರೂ.ಗೆ ಮಾರಾಟವಾಗಿದೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

Advertisement

ದಾವಣಗೆರೆ

Advertisement
To Top