Connect with us

Dvgsuddi Kannada | online news portal | Kannada news online

ದಾವಣಗೆರೆ ಅಡಿಕೆ ದರದಲ್ಲಿ ಭಾರೀ ಕುಸಿತ; ಮೇ 20ರ ರಾಶಿ ಅಡಿಕೆ ಧಾರಣೆಯಲ್ಲಿ ಕನಿಷ್ಠ, ಗರಿಷ್ಠ ಬೆಲೆ ಎಷ್ಟಿದೆ..?

arecanut

ದಾವಣಗೆರೆ

ದಾವಣಗೆರೆ ಅಡಿಕೆ ದರದಲ್ಲಿ ಭಾರೀ ಕುಸಿತ; ಮೇ 20ರ ರಾಶಿ ಅಡಿಕೆ ಧಾರಣೆಯಲ್ಲಿ ಕನಿಷ್ಠ, ಗರಿಷ್ಠ ಬೆಲೆ ಎಷ್ಟಿದೆ..?

ದಾವಣಗೆರೆ: ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾದ ಅಡಿಕೆ ದರಲ್ಲಿ (arecanut rate) ಭಾರೀ ಇಳಿಕೆ ಕಂಡಿದೆ. ಒಂದೇ ವಾರದಲ್ಲಿ 1,800 ರೂ. ಇಳಿಕೆಯಾಗಿದೆ. ಮೇ 13ರಂದು 55 ಸಾವಿರ ಗಡಿ ದಾಟಿದ್ದ ದರ, ಇಂದು (ಮೇ 20) ಗರಿಷ್ಠ‌ ಬೆಲೆ ಕ್ವಿಂಟಲ್ ಗೆ 53,700 ರೂ.ಗಳಿದ್ದು, ಕನಿಷ್ಠ ಬೆಲೆ 47,512ರೂ.ಗಳಾಗಿದೆ.

ಕಳೆದ ವರ್ಷ (2023) ಜುಲೈ ತಿಂಗಳಲ್ಲಿ ಗರಿಷ್ಠ ಬೆಲೆ 57 ಸಾವಿರ ತಲುಪಿತ್ತು. ಹೀಗಾಗಿ ಇನ್ನೂ ಸ್ವಲ್ಪ‌ ದಿನ ಇಟ್ಟು ಮಾರಾಟ ಮಾಡುವವರಿಗೆ‌ ಒಳ್ಳೆಯ ರೇಟ್ ಸಿಗುವ ಸಾಧ್ಯತೆ ಇದೆ. ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಉತ್ತಮ ಮಳೆಯಾಗುತ್ತಿದ್ದು, ಬಿಸಿಲಿನ ಅಲೆ ತಗ್ಗಿದೆ. ತೀವ್ರ ಬರದಿಂದ ಬೋರ್ ವೆಲ್ ಗಳಲ್ಲಿ ಅಂತರ್ಜಲ ಮಟ್ಟ ತೀವ್ರ ಕುಸಿದಿತ್ತು. ಇದೀಗ ಪೂರ್ವ ಮುಂಗಾರು ಮಳೆ ಉತ್ತಮವಾಗುತ್ತಿದ್ದು, ಈ ವರ್ಷ ವಾಡಿಕೆಗಿಂತ ಹೆಚ್ಚು ಮಳೆಯಾಗುವ ನಿರೀಕ್ಷೆ ಇದೆ.

2024 ಜನವರಿ 15ರಂದು ರಾಶಿ ಅಡಿಕೆ ಗರಿಷ್ಠ ದರ 50,500 ರೂಪಾಯಿ ಗಡಿ ತಲುಪಿತ್ತು. ಫೆಬ್ರವರಿ ತಿಂಗಳಲ್ಲಿ‌ ಏಕಾಏಕಿ 48 ಸಾವಿರಕ್ಕೆ ಕುಸಿದಿತ್ತು. ಮಾರ್ಚ್ ತಿಂಗಳಳಲ್ಲಿ ಸ್ವಲ್ಪ ಚೇತರಿಕೆ ಕಂಡು 50 ಸಾವಿರ ತಲುಪಿತ್ತು. ಈಗ ಏಪ್ರಿಲ್ ನಲ್ಲಿ ಗರಿಷ್ಠ 54 ಸಾವಿರ ಗಡಿ ತಲುಪಿತ್ತು. ಮೇ ತಿಂಗಳಲ್ಲಿ ಗರಿಷ್ಠ ಈಗ 55 ಸಾವಿರ ತಲುಪಿ ಕುಸಿತ ಕಂಡಿದೆ.

ಜಿಲ್ಲೆಯ ಪ್ರಮುಖ ಮಾರುಕಟ್ಟೆಯಾದ ಚನ್ನಗಿರಿ ವಹಿವಾಟಿನಲ್ಲಿ ಮೇ 20ರಂದು ಪ್ರತಿ ಕ್ವಿಂಟಲ್ ಉತ್ತಮ ರಾಶಿ ಅಡಿಕೆ ಕನಿಷ್ಠ ಬೆಲೆ 47,512 ರೂ., ಗರಿಷ್ಠ ಬೆಲೆ 53,700 ಹಾಗೂ ಸರಾಸರಿ ಬೆಲೆ 52,223 ರೂ.ಗೆ ಮಾರಾಟವಾಗಿದೆ.

 

 

ಲೋಕಲ್ ಸುದ್ದಿಗಳನ್ನು ಕ್ಷಣಾರ್ಧದಲ್ಲಿ ಲೋಕದ ಜನರ ಬೆರಳ ತುದಿಗೆ ತಲುಪಿಸುವ ಉದ್ದೇಶದಿಂದ ಡಿವಿಜಿಸುದ್ದಿ.ಕಾಂ ಕನ್ನಡ ಆನ್ ಲೈನ್ ನ್ಯೂಸ್ ಪೋರ್ಟಲ್ (ಡಿಜಿಟಲ್ ಮಾಧ್ಯಮ) ಸ್ಥಾಪಿಸಲಾಗಿದೆ. ಸ್ಥಳೀಯ ಸುದ್ದಿ ಜೊತೆ ಇನ್ಫೋರ್ಮೆಟಿವ್ ನ್ಯೂಸ್ ಕೊಡುವುದು ಮೊದಲ ಆದ್ಯತೆ. ಇದಲ್ಲದೆ ರಾಜಕೀಯ, ಶಿಕ್ಷಣ, ಉದ್ಯೋಗ, ಕ್ರೀಡೆ, ಅಪರಾಧ ಸುದ್ದಿ ಹಾಗೂ ವಿಶೇಷವಾಗಿ ಕೃಷಿ ಮತ್ತು ರೈತರಿಗೆ ಉಪಯುಕ್ತ ಮಾಹಿತಿ ನೀಡುವುದು ಮುಖ್ಯ ಉದ್ದೇಶ. ಸುದ್ದಿ, ಮಾಹಿತಿ, ಸಲಹೆ, ಸೂಚನೆ ನೀಡಲು ವಾಟ್ಸಾಪ್ (7483892205) ಮಾಡಿ... Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ದಾವಣಗೆರೆ

ದಾವಣಗೆರೆ

Advertisement
Advertisement Enter ad code here

Title

To Top