Connect with us

Dvgsuddi Kannada | online news portal | Kannada news online

ದಾವಣಗೆರೆ: ಅಡಿಕೆಗೆ ಭರ್ಜರಿ ಬೆಲೆ; ಒಂದೇ‌ ದಿನ 600 ರೂ. ಏರಿಕೆ; 51 ಸಾವಿರ ಗಡಿಯತ್ತ ರಾಶಿ ಅಡಿಕೆ ದರ

ಪ್ರಮುಖ ಸುದ್ದಿ

ದಾವಣಗೆರೆ: ಅಡಿಕೆಗೆ ಭರ್ಜರಿ ಬೆಲೆ; ಒಂದೇ‌ ದಿನ 600 ರೂ. ಏರಿಕೆ; 51 ಸಾವಿರ ಗಡಿಯತ್ತ ರಾಶಿ ಅಡಿಕೆ ದರ

ದಾವಣಗೆರೆ: ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾದ ಅಡಿಕೆ ದರಕ್ಕೆ (arecanut rate) ಮತ್ತೆ ಬಂಪರ್ ಬೆಲೆ ಬಂದಿದ್ದು,‌ ಒಂದೇ ದಿನ 600 ರೂ. ಏರಿಕೆಯಾಗಿದೆ. ಸಾಕಷ್ಟು ಏರಿಳಿತ ಬಳಿಕ ಈಗ 51 ಸಾವಿರ ಗಡಿಯತ್ತ ಮುನ್ನುಗ್ಗುತ್ತಿದೆ. ಇಂದು (ಏ.15) ರಾಶಿ ಅಡಿಕೆ ಗರಿಷ್ಠ‌ ಬೆಲೆ ಕ್ವಿಂಟಲ್ ಗೆ 50,539 ರೂ.ಗಳಿದ್ದು, ಕನಿಷ್ಠ ಬೆಲೆ 48,899 ರೂ.ಗಳಾಗಿದೆ. ಹಿಂದಿನ ದಿನ ಮಾರುಕಟ್ಟೆಯಲ್ಲಿ ಗರಿಷ್ಠ 49,915 ರೂಪಾಯಿ ಇತ್ತು.

ಏಪ್ರಿಲ್ ತಿಂಗಳ ಆರಂಭದಿಂದಲೂ ದರ ಸತತ ಏರಿಕೆ ಕಾಣುತ್ತಿದ್ದು, ರೈತರಲ್ಲಿ ಸಂತಸ ಒಂದೆಡೆಯಾದ್ರೆ, ಅಂತರ್ಜಲ ಕುಸಿತದಿಂದ ಆತಂಕ ಮತ್ತೊಂದೆಡೆಯಾಗಿದೆ. ಕಳೆದ ವರ್ಷ (2023) ಜುಲೈ ತಿಂಗಳಲ್ಲಿ ಗರಿಷ್ಠ 57 ಸಾವಿರ ತಲುಪಿತ್ತು. ಹೀಗಾಗಿ ಸ್ವಲ್ಪ‌ ದಿನ ಇಟ್ಟು ಮಾರಾಟ ಮಾಡುವವರಿಗೆ‌ ಮುಂದೆ ಒಳ್ಳೆಯ ರೇಟ್ ಸಿಗುವ ಸಾಧ್ಯತೆ ಇದೆ. ಏಪ್ರಿಲ್ ತಿಂಗಳಲ್ಲಿ ಅಸಲಿ ಬೇಸಿಗೆ ಈಗ ಶುರುವಾಗಿದೆ. ಬೋರ್ ವೆಲ್ ಗಳಲ್ಲಿ ಅಂತರ್ಜಲ ಮಟ್ಟ ತೀವ್ರ ಕುಸಿತವಾಗಿದೆ. ವಾತಾವರಣದಲ್ಲಿ ಬಿಸಿಗಾಳಿ ಹೆಚ್ಚಿದ್ದು, ಅಡಿಕೆ ಬೆಳೆ ಒಣಗುತ್ತಿವೆ. ಹೇಗಾದ್ರೂ ಮಾಡಿ ಏಪ್ರಿಲ್, ಮೇ ತಿಂಗಳಲ್ಲಿ ಅಡಿಕೆ ತೋಟ ಬದುಕಿಸಿಕೊಂಡರೆ ಸಾಕು ಎಂದು ರೈತರು ಹರಸಾಹಸ ಪಡುತ್ತಿದ್ದಾರೆ. ಕಳೆದ ಡರಡ್ಮೂರು ದಿನ ಮಳೆ, ಕೆಲ ಜಿಲ್ಲೆಯಲ್ಲಿ ಆಗಿದ್ದರೂ ತಾಪಮಾನದಲ್ಲಿ ಇಳಿಕೆಯಾಗಿಲ್ಲ.

ಜಿಲ್ಲೆಯಲ್ಲಿ ಬಿಸಿ ವಾತಾವರಣ ನಿರ್ಮಾಣವಾಗಿದ್ದು, ಬಿಸಿಲಿನ ತೀವ್ರತೆ ದಿನದಿಂದ ದಿನಕ್ಕೆ ಹೆಚ್ಚಾಗಿದೆ. ತಾಪಮಾನಕ್ಕೆ ಹರಳು ಉದುರುತ್ತಿವೆ. ಬೋರ್ ವೆಲ್ ಗಳು ಬತ್ತಿದ್ದು ರೈತರು ಟ್ಯಾಂಕರ್ ಮೊರೆ ಹೋಗಿದ್ದಾರೆ. 2023ರ ಏಪ್ರಿಲ್ ನಲ್ಲಿ 48 ಸಾವಿರವಿದ್ದ ಬೆಲೆ, ಮೇನಲ್ಲಿ 49 ಸಾವಿರ ಗಡಿ ದಾಟಿತ್ತು. ಜೂನ್ ನಲ್ಲಿ 50 ಸಾವಿರ ಗಡಿ ದಾಟಿದ್ದ ಬೆಲೆ, ಜುಲೈನಲ್ಲಿ ವರ್ಷದಲ್ಲಿಯೇ ಗರಿಷ್ಠ 57 ಸಾವಿರ ತಲುಪಿತ್ತು. ಆಗಸ್ಟ್ ತಿಂಗಳಲ್ಲಿ ಸತತ ಇಳಿಕೆ ಕಂಡು 48 ಸಾವಿರ ತಲುಪಿತ್ತು. ಸೆಪ್ಟೆಂಬರ್‌ ಮೊದಲ 15 ದಿನ ‌46 ಸಾವಿರಕ್ಕೆ ಕುಸಿದು ಆತಂಕ ಉಂಟು ಮಾಡಿತ್ತು. ಆದರೆ, ಅಕ್ಟೋಬರ್ ‌ಕೊನೆಯ ವಾರ ಮತ್ತೆ 47,800 ರೂ.ಗೆ ಏರಿಕೆ ಕಂಡಿತ್ತು. ನವೆಂಬರ್ ನಲ್ಲಿ 47 ಸಾವಿರಕ್ಕೆ ತಲುಪಿ ಸ್ಥಿರವಾಗಿತ್ತು. ಡಿಸೆಂಬರ್ ನಲ್ಲಿ 48 ಸಾವಿರ ಗಡಿ ದಾಟಿತ್ತು. ಇದೀಗ 2024 ಜನವರಿ 15ರಂದು ಗರಿಷ್ಠ ದರ 50,500 ರೂಪಾಯಿ ಗಡಿ ತಲುಪಿತ್ತು. ಫೆಬ್ರವರಿ ತಿಂಗಳಿಂದ ಸತತ ಕುಸಿತ ಕಂಡು ಈಗ 50 ಸಾವಿರ ಗಡಿ ದಾಟಿದೆ.

ಜಿಲ್ಲೆಯ ಪ್ರಮುಖ ಮಾರುಕಟ್ಟೆಯಾದ ಚನ್ನಗಿರಿ ವಹಿವಾಟಿನಲ್ಲಿ ಏಪ್ರಿಲ್ 15ರಂದು ಪ್ರತಿ ಕ್ವಿಂಟಲ್ ಉತ್ತಮ ರಾಶಿ ಅಡಿಕೆ ಕನಿಷ್ಠ ಬೆಲೆ 48,899ರೂ, ಗರಿಷ್ಠ ಬೆಲೆ 50,539 ಹಾಗೂ ಸರಾಸರಿ ಬೆಲೆ 50,088 ರೂ.ಗೆ ಮಾರಾಟವಾಗಿದೆ. ಬೆಟ್ಟೆ ಅಡಿಜೆ ಗರಿಷ್ಠ 35,236.

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

Advertisement

ದಾವಣಗೆರೆ

Advertisement
To Top