Connect with us

Dvgsuddi Kannada | online news portal | Kannada news online

ದಾವಣಗೆರೆ: ಅಡಿಕೆ ಬೆಲೆಯಲ್ಲಿ ಮತ್ತಷ್ಟು ಕುಸಿತ; ಒಂದು ವಾರದಲ್ಲಿ 800ರೂ. ಇಳಿಕೆ

ದಾವಣಗೆರೆ

ದಾವಣಗೆರೆ: ಅಡಿಕೆ ಬೆಲೆಯಲ್ಲಿ ಮತ್ತಷ್ಟು ಕುಸಿತ; ಒಂದು ವಾರದಲ್ಲಿ 800ರೂ. ಇಳಿಕೆ

ದಾವಣಗೆರೆ: ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾದ ಅಡಿಕೆ ಧಾರಣೆಯಲ್ಲಿ ಮತ್ತಷ್ಟು ಇಳಿಕೆ ಕಂಡಿದೆ. ಬೆಲೆ ಏರಿಕೆ ನಿರೀಕ್ಷೆಯಲ್ಲಿದ್ದ ರೈತರಿಗೆ ಮತ್ತಷ್ಟು ಸಂಕಷ್ಟ ಉಂಟು ಮಾಡಿದೆ. ದಿನದ ವಹಿವಾಟಿನ ಏರಿಳಿತ ನಡುವೆಯೇ ಜಿಲ್ಲೆಯಲ್ಲಿ ಇಂದು (ಮಾ.06) ಪ್ರತಿ ಕ್ವಿಂಟಾಲ್ ಗೆ ಗರಿಷ್ಠ 45,679 ರೂ.ಗೆ ಮಾರಾಟವಾಗಿದೆ. ಈ ಮೂಲಕ ಹಿಂದಿನ ಒಂದು ವಾರದ ಮಾರುಕಟ್ಟೆಗೆ ಹೊಲಿಸಿದ್ರೆ ಬೆಲೆಯಲ್ಲಿ 800ರೂ.ಗಳಷ್ಟು ಇಳಿಕೆ ಆಗಿದೆ.

ಜಿಲ್ಲೆಯ ಪ್ರಮುಖ ಮಾರುಕಟ್ಟೆಯಾದ ಚನ್ನಗಿರಿಯಲ್ಲಿ ಉತ್ತಮ ರಾಶಿ ಅಡಿಕೆ ಪ್ರತಿ ಕ್ವಿಂಟಾಲ್ ಗೆ ದರ 45,679 ಗರಿಷ್ಠ ಬೆಲೆ ದಾಖಲಾಗಿದೆ. ನಿನ್ನೆ ಕ್ವಿಂಟಾಲ್ ಗೆ ಗರಿಷ್ಠ 45,899 ರೂ. ದಾಖಲಾಗಿತ್ತು. 2nd ಬೆಟ್ಟೆ ಅಡಿಕೆ ಗರಿಷ್ಠ 36,089 ಬೆಲೆಗೆ ಮಾರಾಟವಾಗಿದೆ.

ಮಾ.06ರಂದು ಉತ್ತಮ ರಾಶಿಯ ಕನಿಷ್ಠ ಬೆಲೆ‌ 4,009 ಆಗಿದ್ದು, ಗರಿಷ್ಠ ಬೆಲೆ 45,679 ಹಾಗೂ ಸರಾಸರಿ ಬೆಲೆ 44,880 ಆಗಿದೆ. ಇನ್ನೂ 2nd ಬೆಟ್ಟೆ ಅಡಿಕೆ ಬೆಲೆ ಕನಿಷ್ಠ ಬೆಲೆ 32,629 ಗರಿಷ್ಠ ಬೆಲೆ 36,089 ಹಾಗೂ ಸರಾಸರಿ ಬೆಲೆ 34,437 ಆಗಿದೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top