Connect with us

Dvgsuddi Kannada | online news portal | Kannada news online

ದಾವಣಗೆರೆ: ಅಡಿಕೆ ಬೆಲೆಯಲ್ಲಿ ಮತ್ತಷ್ಟು ಏರಿಕೆ; ಕ್ವಿಂಟಾಲ್ ಗೆ 46,100 ರೂ..

ದಾವಣಗೆರೆ

ದಾವಣಗೆರೆ: ಅಡಿಕೆ ಬೆಲೆಯಲ್ಲಿ ಮತ್ತಷ್ಟು ಏರಿಕೆ; ಕ್ವಿಂಟಾಲ್ ಗೆ 46,100 ರೂ..

ದಾವಣಗೆರೆ: ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾದ ಅಡಿಕೆ ಧಾರಣೆ ಮತ್ತೆ ಏರಿಕೆ ಹಾದಿಗೆ ಮರಳಿದೆ. ಕಳೆದ 12 ದಿನದಿಂದ ಸತತ ಏರಿಕೆ ಕಾಣುತ್ತಿದೆ. ಸುಮಾರು 1200 ರೂಪಾಯಿಗಳಷ್ಟು ಏರಿಕೆ ಕಂಡಿದ್ದು, ಮಾರ್ಚ್ ಆರಂಭದಿಂದ ಕುಸಿತದಲ್ಲಿದ್ದ ಬೆಲೆ ಈಗ ಏರಿಕೆಯತ್ತ‌ ಮುಖ ಮಾಡಿದೆ. ಇದರಿಂದ ಅಡಿಕೆ ಬೆಳೆದ ರೈತರಲ್ಲಿ ಸಂತಸ ಉಂಟು ಮಾಡಿದೆ.

ದಿನದ ವಹಿವಾಟಿನ ಏರಿಳಿತ ನಡುವೆಯೇ ಜಿಲ್ಲೆಯಲ್ಲಿ ಇಂದು (ಮಾ.31) ಪ್ರತಿ ಕ್ವಿಂಟಾಲ್ ಗೆ ಗರಿಷ್ಠ 46,100 ರೂ.ಗೆ ಮಾರಾಟವಾಗಿದೆ. ಜಿಲ್ಲೆಯ ಪ್ರಮುಖ ಮಾರುಕಟ್ಟೆಯಾದ ಚನ್ನಗಿರಿಯಲ್ಲಿ ಉತ್ತಮ ರಾಶಿ ಅಡಿಕೆ ಪ್ರತಿ ಕ್ವಿಂಟಾಲ್ ಗೆ ದರ 46,100 ಗರಿಷ್ಠ ಬೆಲೆ ದಾಖಲಾಗಿದೆ. ನಿನ್ನೆ ಕ್ವಿಂಟಾಲ್ ಗೆ ಗರಿಷ್ಠ 45,021ರೂ. ದಾಖಲಾಗಿತ್ತು. 2nd ಬೆಟ್ಟೆ ಅಡಿಕೆ ಗರಿಷ್ಠ 36,200 ಬೆಲೆಗೆ ಮಾರಾಟವಾಗಿದೆ.

ಮಾ.31 ರಂದು ಉತ್ತಮ ರಾಶಿಯ ಕನಿಷ್ಠ ಬೆಲೆ‌ 43,179 ಆಗಿದ್ದು, ಗರಿಷ್ಠ ಬೆಲೆ 46,100 ಹಾಗೂ ಸರಾಸರಿ ಬೆಲೆ 44,879 ಆಗಿದೆ. ಇನ್ನೂ 2nd ಬೆಟ್ಟೆ ಅಡಿಕೆ ಬೆಲೆ ಕನಿಷ್ಠ ಬೆಲೆ 33,600 ಗರಿಷ್ಠ ಬೆಲೆ 36,200 ಹಾಗೂ ಸರಾಸರಿ ಬೆಲೆ 34,506 ಆಗಿದೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top