Connect with us

Dvgsuddi Kannada | online news portal | Kannada news online

ದಾವಣಗೆರೆ: ಅಡಿಕೆ ಬೆಲೆಯಲ್ಲಿ‌ ಮತ್ತೆ ಕುಸಿತ; ನಾಲ್ಕೇ ದಿನದಲ್ಲಿ 50 ಸಾವಿರದಿಂದ 48 ಸಾವಿರಕ್ಕೆ ಇಳಿದ‌ ಬೆಲೆ..!

ಪ್ರಮುಖ ಸುದ್ದಿ

ದಾವಣಗೆರೆ: ಅಡಿಕೆ ಬೆಲೆಯಲ್ಲಿ‌ ಮತ್ತೆ ಕುಸಿತ; ನಾಲ್ಕೇ ದಿನದಲ್ಲಿ 50 ಸಾವಿರದಿಂದ 48 ಸಾವಿರಕ್ಕೆ ಇಳಿದ‌ ಬೆಲೆ..!

ದಾವಣಗೆರೆ: ಜಿಲ್ಲೆಯ ಪ್ರಮುಖ ವಾಣಿಜ್ಯ ಬೆಳೆಯಾದ ಅಡಿಕೆ ಧಾರಣೆಯಲ್ಲಿ ಕಳೆದ 15 ದಿನದಿಂದ ಏರಿಕೆಯತ್ತ ಮುಖ ಮಾಡಿದ್ದ ಬೆಲೆಯಲ್ಲಿ ಎರಡ್ಮೂರು ದಿನದಿಂದ‌ ಸತತ ಕುಸಿತ ಕಂಡಿದೆ. ಮಾರ್ಚ್ ಅಂತ್ಯದಲ್ಲಿ 45 ಸಾವಿರಕ್ಕೆ ಕುಸಿದಿದ್ದ ದರ, ಏಪ್ರಿಲ್ ಆರಂಭದಲ್ಲಿ ಸ್ವಲ್ಪ ಚೇತರಿಕೆ ಕಂಡು ಬೆಲೆ ಏರಿಕೆಯತ್ತ‌ ಮುಖ ಮಾಡಿತ್ತು. ಗರಿಷ್ಠ 50 ಸಾವಿರ ಗಡಿ ತಲುಪಿತ್ತು. ಇದೀಗ‌ ಏರಿಕೆಯಾದ ನಾಲ್ಕೇ ದಿನದಲ್ಲಿ ಮತ್ತೆ 48 ಸಾವಿರಕ್ಕೆ ಕುಸಿದಿದೆ. ಪ್ರತಿ ಕ್ವಿಂಟಾಲ್ ಬೆಲೆ ಇಂದು (ಏ.26) ಗರಿಷ್ಠ ಬೆಲೆ 48,089 ಮರಾಟವಾಗಿದೆ. ಈ ಮೂಲಕ ಒಮ್ಮಲೇ 2000 ರೂ. ಕುಸಿತ ಕಂಡಿದೆ.

ಜಿಲ್ಲೆಯ ಪ್ರಮುಖ ಮಾರುಕಟ್ಟೆಯಾದ ಚನ್ನಗಿರಿಯಲ್ಲಿ ವಹಿವಾಟಿನಲ್ಲಿ ಏ.26 ರಂದು ಪ್ರತಿ ಕ್ವಿಂಟಾಲ್ ಗೆ ಕನಿಷ್ಠ ಬೆಲೆ 44,899 ಗರಿಷ್ಠ ಬೆಲೆ 48,089 ಹಾಗೂ ಸರಾಸರಿ ಬೆಲೆ 47,266 ರೂ. ಆಗಿದೆ. ಇದೇ ವೇಳೆ ಬೆಟ್ಟೆ ಅಡಿಕೆ ಗರಿಷ್ಠ 34,999 ರೂ.ಗೆ ಮಾರಾಟವಾಗಿದೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

Advertisement

ದಾವಣಗೆರೆ

Advertisement
To Top