ದಾವಣಗೆರೆ: ಮಧ್ಯ ಕರ್ನಾಟಕ ದಾವಣಗೆರೆ ಪ್ರಮುಖ ವಾಣಿಜ್ಯ ಬೆಳೆಯಾದ ಅಡಿಕೆ ಧಾರಣೆಯಲ್ಲಿ ಅಲ್ಪ ಚೇತರಿಕೆ ಕಂಡಿದೆ. ಕಳೆದ ಎರಡ್ಮೂರು ದಿನದಿಂದ ಕಸಿತ ಕಾಣುತ್ತಿದ್ದ ರಾಶಿ ಅಡಿಕೆ ಬಲೆ ಇಂದು (ಜ.14) 200 ರೂಪಾಯಿಯಷ್ಟು ಚೇತರಿಕೆ ಕಂಡಿದೆ.
ಕಳೆದ ಕೆಲವು ದಿನಗಳಿಂದ ಏರಿಕೆಯಾಗಿದ್ದ ಅಡಿಕೆ ಎರಡ್ಮೂರು ದಿನದಿಂದ ಇಳಿಕೆ ಕಂಡಿತ್ತು. ಇದೀಗ ಮತ್ತೆ ಚೇತರಿಕೆ ಕಂಡಿದ್ದು, ರೈತರ ಮೊಗದಲ್ಲಿ ಸಂತಸ ಮೂಡುವಂತೆ ಮಾಡಿದೆ. ಮುಂಬರುವ ದಿನಗಳಲ್ಲಿ ಅಡಿಕೆ ಧಾರಣೆ ಮತ್ತಷ್ಟು ಚೇತರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
- ಜಿಲ್ಲೆಯ ವಿವಿಧ ಕಡೆ ಅಡಿಕೆ ಧಾರಣೆ
- ಚನ್ನಗಿರಿ-ರಾಶಿ ಅಡಿಕೆ 46,799 ರೂ.
- ದಾವಣಗೆರೆ- ರಾಶಿ ಅಡಿಕೆ 45,269 ರೂ.
- ಹೊನ್ನಾಳಿ-ರಾಶಿ ಅಡಿಕೆ 46,099 ರೂ.
ಜಿಲ್ಲೆಯ ಪ್ರಮುಖ ಅಡಿಕೆ ಮಾರುಕಟ್ಟೆಯಾದ ಚನ್ನಗಿರಿಯಲ್ಲಿ ನಿನ್ನೆ (ಜ.13) ರಾಶಿ ಗರಿಷ್ಠ ಕ್ವಿಂಟಾಲ್ ಗೆ ದರ 46,499 ದಾಖಲಾಗಿತ್ತು. ಇಂದು 46,799 ಏರಿಕೆಯಾಗಿದ್ದು, ಅಲ್ಪ ಪ್ರಮಾಣದಲ್ಲಿ ಚೇತರಿಕೆಯಾಗಿದೆ.



