ದಾವಣಗೆರೆ: ಉತ್ತಮ ಅಡಿಕೆ ಇಳುವರಿಗೆ ಸಮಗ್ರ ನಿರ್ವಹಣಾ ಪದ್ಧತಿ ಅನುಸರಿಸಿ ಎಂದು ತೋಟಗಾರಿಕೆ ವಿಜ್ಞಾನಿ ಬಸವನಗೌಡ ಎಂ ಜಿ ಹೇಳಿದರು.
ಐಸಿಎಆರ್ ತರಳಬಾಳು ಕೃಷಿ ವಿಜ್ಞಾನ ಕೇಂದ್ರದಿಂದ ಚನ್ನಗಿರಿ ತಾಲೂಕು ಆಲೂರು ಗ್ರಾಮದಲ್ಲಿ ಹಿರೇಕಲೂರು ತರಳಬಾಳು ಅಮೃತ ರೈತ ಉತ್ಪಾದಕ ಕಂಪನಿಯ ವತಿಯಿಂದ ಪ್ರಧಾನ ರೈತ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಅಡಿಕೆ ಬೆಳೆಯ ವಿಸ್ತರಣೆ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ರೈತರು ಇರುವ ಬೆಳೆಯನ್ನು ಸರಿಯಾದ ನಿರ್ವಹಣಾ ಕ್ರಮಗಳನ್ನು ಕೈಗೊಳ್ಳದಿದ್ದರೆ ತೋಟಗಳು ಅನೇಕ ರೋಗಗಳಿಗೆ ತುತ್ತಾಗಿ ಇಳುವರಿ ಕುಂಠಿತವಾಗುತ್ತದೆ. ರೈತರಿಗೆ ಸಮಗ್ರ ನೀರು ನಿರ್ವಹಣೆ, ಕಿಟ ಮತ್ತು ಪೋಷಕಾಂಶಗಳ ನಿರ್ವಹಣೆ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನೀಡಿದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಕಂಪನಿಯ ಅಧ್ಯಕ್ಷ ಶಿವಕುಮಾರ ಹಾಗೂ ನಿರ್ದೇಶಕರುಗಳು ನೆರವೇರಿಸಿಕೊಟ್ಟರು. ಬೇಸಾಯ ತಜ್ಞರು ಮಲ್ಲಿಕಾರ್ಜುನ ಬಿ ಓ ಮಾತನಾಡಿ, ಕಂಪನಿ ಸ್ಥಾಪನೆಯಾಗಿ ಒಂದು ವರ್ಷ ಕಳೆದಿದ್ದು ನಾವು ಮುಂಬರುವ ದಿನಗಳಲ್ಲಿ ತೆಂಗಿನ ಉಪ ಉತ್ಪನ್ನಗಳನ್ನು ಮಾಡಿ ಮಾರಾಟ ಮಾಡಿದರೆ ಮಾತ್ರ ಕಂಪನಿ ಹೆಚ್ಚು ಲಾಭಗಳಿಸುತ್ತದೆ ಮತ್ತು ರೈತರಿಗೆ ಅನುಕೂಲವಾಗುತ್ತದೆ ಎಂದರು.
ಕಾರ್ಯಕ್ರಮದ ನಿರೂಪಣೆಯನ್ನು ಆಕಾಶ್ ಎನ್ ಆರ್, ಸ್ವಾಗತವನ್ನು ಶಶಿಕಲಾ ನೆರವೇರಿಸಿಕೊಟ್ಟರು. ಕಾರ್ಯಕ್ರಮದಲ್ಲಿ ಕಂಪನಿಯ ಸಿಇಓ ವಿನಯ್ ಕುಮಾರ್, ಉಪಾಧ್ಯಕ್ಷರಾದ ಜಗದೀಶ್, ನಿರ್ದೇಶಕರುಗಳಾದ ಚಂದ್ರಪ್ಪ, ಮಲ್ಲಿಕಾರ್ಜುನ್, ಭರತ್ ರಾಜ್, ಗಣೇಶಪ್ಪ, ಯಶೋದಮ್ಮ, ಶಶಿಕಲಾ, ತಿಪ್ಪೇಸ್ವಾಮಿ ಹಾಗೂ ಅಕ್ಕಪಕ್ಕದ ಗ್ರಾಮದ ಪ್ರಗತಿಪರ ರೈತರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.



