ದಾವಣಗೆರೆ: ಸಾಮಾನ್ಯವಾಗಿ ಅಡಿಕೆ ಸಸಿ ಹಚ್ಚಿ ನಾಲ್ಕು ವರ್ಷಕ್ಕೆ ಅಡಿಕೆ ಹೊಂಬಾಳೆ ಬಿಡುವುದನ್ನು ನೋಡಿದ್ದೇವೆ. ಆದರೆ, ಚನ್ನಗಿರಿ ತಾಲ್ಲೂಕಿನ ತಣಿಗೆರೆ ಗ್ರಾಮದ ವಿಶ್ವನಾಥ್ ದೊಡ್ಮನೆ ಎಂಬುವರ ತೋಟದಲ್ಲಿ 2 ವರ್ಷದ ಅಡಿಕೆ ಸಸಿಯಲ್ಲಿ ಹೊಂಬಾಳೆ ಕಾಣಿಸಿಕೊಂಡು ಅಚ್ಚರಿ ಮೂಡಿಸಿದೆ.
ರಾಸಾಯನಿಕ ಗೊಬ್ಬರ, ಕಳೆನಾಶಕ ಇಲ್ಲದೇ ಸಾವಯವ ಗೊಬ್ಬರ ಬಳಸಿ ಅಡಿಕೆ ಬೆಳೆಯಲಾಗಿದ್ದು, 12 ಎಕರೆಯಲ್ಲಿ ಅಡಿಕೆ ಸಸಿ ಹಚ್ಚಿದ್ದಾರೆ. ನಾವೇ ಅಡಿಕೆ ಗೋಟು ತಂದು ಸಸಿ ಮಾಡಿ, ಹಾಕಿದ್ದೇವೆ. ಎಲ್ಲ ಸಸಿ ಉತ್ತಮವಾಗಿ ಬೆಳೆದಿದ್ದು, ಎರಡೇ ವರ್ಷಕ್ಕೆ ಹೊಂಬಾಳೆ ಬಿಟ್ಟಿರುವುದು ನಮಗೂ ಅಚ್ಚರಿ ಮೂಡಿಸಿದೆ. ಸಮಯಕ್ಕೆ ಸರಿಯಾಗಿ ನೀರು ಬಿಟ್ಟರೆ , ಮತ್ತೇನನ್ನು ನೀಡಿಲ್ಲ ಎನ್ನುತ್ತಾರೆ ವಿಶ್ವನಾಥ್ ದೊಡ್ಮನೆ.