Connect with us

Dvgsuddi Kannada | online news portal | Kannada news online

ನೀವು ಹೈನುಗಾರಿಕೆ, ಕುರಿ, ಮೇಕೆ ಸಾಕಾಣಿಕೆ ಪ್ಲ್ಯಾನ್ ಮಾಡಿದ್ದೀರಾ..? ಇಲ್ಲಿದೆ ಸರ್ಕಾರದ ವತಿಯಿಂದ ಉಚಿತ  ತರಬೇತಿ ಶಿಬಿರ

ದಾವಣಗೆರೆ

ನೀವು ಹೈನುಗಾರಿಕೆ, ಕುರಿ, ಮೇಕೆ ಸಾಕಾಣಿಕೆ ಪ್ಲ್ಯಾನ್ ಮಾಡಿದ್ದೀರಾ..? ಇಲ್ಲಿದೆ ಸರ್ಕಾರದ ವತಿಯಿಂದ ಉಚಿತ  ತರಬೇತಿ ಶಿಬಿರ

ನೀವು ಹೈನುಗಾರಿಕೆ, ಕುರಿ, ಮೇಕೆ ಸಾಕಾಣಿಕೆ ಪ್ಲ್ಯಾನ್ ಮಾಡಿದ್ದೀರಾ..? ಇಲ್ಲಿದೆ ಸರ್ಕಾರದ ವತಿಯಿಂದ ಉಚಿತ  ತರಬೇತಿ ಶಿಬಿರ

ದಾವಣಗೆರೆ: ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ವತಿಯಿಂದ ಸೆ. 06 ರಿಂದ 08 ರವರೆಗೆ 3 ದಿನಗಳ ಕಾಲ ಆಧುನಿಕ ಹೈನುಗಾರಿಕೆ, ಕುರಿ ಮತ್ತು ಮೇಕೆ ಸಾಕಾಣಿಕೆ ತರಬೇತಿಯನ್ನು ಹಮ್ಮಿಕೊಳ್ಳಲಾಗಿದೆ.

ದಾವಣಗೆರೆ ಪಿ.ಬಿ.ರಸ್ತೆಯ ಅರುಣ ಚಿತ್ರ ಮಂದಿರದ ಎದುರಿನ ಪಶು ಆಸ್ಪತ್ರೆ ಅವರಣದಲ್ಲಿರುವ ಪಶುಪಾಲನಾ ಮತ್ತು ಪಶುವೈದ್ಯಕೀಯ ತರಬೇತಿ ಕೇಂದ್ರದಲ್ಲಿ ಸೆ. 06, 7 ಮತ್ತು 8 ರಂದು ಬೆಳೆಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆವರೆಗೆ 3 ದಿನಗಳ ತರಬೇತಿಯನ್ನು ಆಯೋಜಿಸಲಾಗಿದೆ. ತರಬೇತಿ ಕಾರ್ಯಕ್ರಮಕ್ಕೆ ಯಾವುದೇ ಪ್ರೋತ್ಸಾಹಧನ ಮತ್ತು ಭತ್ಯೆಗಳನ್ನು ನೀಡಲಾಗುವುದಿಲ್ಲ. ಆಸಕ್ತಿಯುಳ್ಳ ರೈತರು, ಮಹಿಳೆಯರು, ನಿರುದ್ಯೋಗ ಯುವಕ ಅಥವಾ ಯುವತಿಯರು ಇದರ ಅನುಕೂಲ ಪಡೆಯಬಹುದಾಗಿದೆ.

ತರಬೇತಿಗೆ ಹಾಜರಾಗುವ ರೈತರು ಆಧಾರ್ ಕಾರ್ಡ್ ಜೆರಾಕ್ಸ್, 2 ಪಾಸ್ ಪೋರ್ಟ್ ಸೈಜ್ ಪೋಟೋ ಮತ್ತು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರು ಜಾತಿ ಪ್ರಮಾಣ ಪತ್ರ ಜೆರಾಕ್ಸ್ ತರಬೇಕು. ಹೆಚ್ಚಿನ ಮಾಹಿತಿಗಾಗಿ ಪಶುವೈದ್ಯಕೀಯ ಸಹಾಯಕರ ತರಬೇತಿ ಕೇಂದ್ರ, ದಾವಣಗೆರೆ ಇವರ ದೂರವಾಣಿ ಸಂಖ್ಯೆ: 08192-233787 ಗೆ ಸಂಪರ್ಕಿಸಬಹುದೆಂದು ಮುಖ್ಯ ಪಶುವೈದ್ಯಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ದಾವಣಗೆರೆ

To Top