ದಾವಣಗೆರೆ: ದಾವಣಗೆರೆ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಿಂದ 2021-22ನೇ ಸಾಲಿನಲ್ಲಿ ಹೊಸ ಕಿಸಾನ್ ಕ್ರೆಡಿಟ್ ಕಾರ್ಡ್ ವಿತರಣಾ ಕಾರ್ಯಕ್ರಮದಡಿ ದನ, ಎಮ್ಮೆ, ಕುರಿ, ಮೇಕೆ, ಹಂದಿ ಹಾಗೂ ಕೋಳಿ ಸಾಕಾಣಿಕೆ ನಿರ್ವಹಣೆಗೆ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ ಪಡೆಯಲು ರೈತರಿಂದ ಅರ್ಜಿ ಆಹ್ವಾನಿಸಲಾಗಿದೆ.
ಕಿಸಾನ್ ಕ್ರೆಡಿಟ್ ಕಾರ್ಡ್ ವಿತರಣಾ ಅಭಿಯಾನ ಕಾರ್ಯಕ್ರಮದಡಿ ಹೈನುಗಾರಿಕೆ ಘಟಕದಡಿ ಮಿಶ್ರತಳಿ ದನಗಳ ನಿರ್ವಹಣೆ (1+1) ಗೆ ಪ್ರತಿ ಹಸುವಿಗೆ ಗರಿಷ್ಠ ರೂ. 14,000/- ರಂತೆ ಒಟ್ಟು ಎರಡು ಹಸುಗಳಿಗೆ ರೂ. 28,000/- ಸಾಲ ಸೌಲಭ್ಯ. ಸುಧಾರಿತ ಎಮ್ಮೆಗಳ ನಿರ್ವಹಣೆ (1+1) ಗೆ ಪ್ರತಿ ಎಮ್ಮೆಗೆ ಗರಿಷ್ಠ ರೂ. 16,000/- ರಂತೆ ಎರಡು ಎಮ್ಮೆಗಳಿಗೆ ರೂ. 32,000/-ಸಾಲ ಸೌಲಭ್ಯವಿದೆ. ಕುರಿ ಸಾಕಾಣಿಕೆ ಘಟಕದಡಿ ಕುರಿಗಳ ನಿರ್ವಹಣೆ (10+01) ಗೆ ಕಟ್ಟಿ ಮೇಯಿಸುವ ಕುರಿಗಳಿಗೆ ರೂ. 24,000/-ರಂತೆ ಹಾಗೂ ಬಯಲಿನಲ್ಲಿ ಮೇಯಿಸುವ ಕುರಿಗಳಿಗೆ ರೂ. 12,000/- ರಂತೆ ಸಾಲ ಸೌಲಭ್ಯವಿದೆ. ಕುರಿಗಳ ನಿರ್ವಹಣೆ (20+01) ಗೆ ಕಟ್ಟಿ ಮೇಯಿಸುವ ಕುರಿಗಳಿಗೆ ರೂ. 48,000/-ರಂತೆ ಹಾಗೂ ಬಯಲಿನಲ್ಲಿ ಮೇಯಿಸುವ ಕುರಿಗಳಿಗೆ ರೂ. 24,000/-ರಂತೆ ಸಾಲ ಸೌಲಭ್ಯವಿದೆ. ಟಗರುಗಳ ನಿರ್ವಹಣೆಗೆ (10ಕ್ಕೆ) ರೂ. 13,000/-ರಂತೆ ಸಾಲ ಸೌಲಭ್ಯ, ಟಗರುಗಳ ನಿರ್ವಹಣೆ (20) ಗೆ ರೂ. 26,000/-ರಂತೆ ಸಾಲ ಸೌಲಭ್ಯವಿದೆ.
ಆಸಕ್ತ ರೈತರು ಹತ್ತಿರದ ಪಶುವೈದ್ಯಕೀಯ ಸಂಸ್ಥೆಯಲ್ಲಿ ಅರ್ಜಿ ನಮೂನೆ ಪಡೆದು ಸಲ್ಲಿಸಬೇಕು, ಹೆಚ್ಚಿನ ಮಾಹಿತಿಗೆ ಡಾ.ಶಿವಕುಮಾರ್ ಜಿ.ಎಸ್. ಸಹಾಯಕ ನಿರ್ದೇಶಕರು, ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿಯಮಿತ, ದಾವಣಗೆರೆ ಜಿಲ್ಲೆ. ಮೊ.ಸಂ. 9353567572 ಕ್ಕೆ ಸಂಪರ್ಕಿಸಬಹುದೆಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪನಿರ್ದೇಶಕ ಡಾ.ಚಂದ್ರಶೇಖರ ಎಸ್. ಸುಂಕದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.



