Connect with us

Dvg Suddi-Kannada News

ದಾವಣಗೆರೆ: ಹೈನುಗಾರಿಕೆ ಉಚಿತ ತರಬೇತಿ ಕಾರ್ಯಕ್ರಮ

ಪ್ರಮುಖ ಸುದ್ದಿ

ದಾವಣಗೆರೆ: ಹೈನುಗಾರಿಕೆ ಉಚಿತ ತರಬೇತಿ ಕಾರ್ಯಕ್ರಮ

ಡಿವಿಜಿ ಸುದ್ದಿ, ದಾವಣಗೆರೆ:

ಪಶುಪಾಲನಾ ಹಾಗೂ ವೈದ್ಯಕೀಯ ಸೇವಾ ಇಲಾಖೆ ವತಿಯಿಂದ  ಅ.14 ರಿಂದ 16 ರವರೆಗೆ ಬೆಳಿಗ್ಗೆ 10 ರಿಂದ ಸಂಜೆ 05 ಗಂಟೆಯವರೆಗೆ 3 ದಿನಗಳ ‘ಆಧುನಿಕ ಹೈನುಗಾರಿಕೆ’ ಉಚಿತ ತರಬೇತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.

ದಾವಣಗೆರೆ ಪಿ.ಬಿ ರಸ್ತೆಯ ಅರುಣಾ ಚಿತ್ರಮಂದಿರದ ಎದುರಿನ ಪಶು ಆಸ್ಪತ್ರೆ ಆವರಣದಲ್ಲಿರುವ ಪಶುವೈದ್ಯಕೀಯ ಸಹಾಯಕರ ತರಬೇತಿ ಕೇಂದ್ರ ಇಲ್ಲಿ ಈ ತರಬೇತಿ ಕಾರ್ಯಕ್ರಮ ನಡೆಯಲಿದೆ.  ಪಾಲ್ಗೊಳ್ಳುವವರಿಗೆ ಯಾವುದೇ ಪ್ರೋತ್ಸಾಹಧನ ಹಾಗೂ ಭತ್ಯೆಗಳನ್ನು ನೀಡಲಾಗುವುದಿಲ್ಲ.  ತರಬೇತಿ ಅವಧಿಯಲ್ಲಿ ಯಾವುದೇ ಊಟ, ವಸತಿ ಸೌಕರ್ಯದ ವ್ಯವಸ್ಥೆಯಿರುವುದಿಲ್ಲ. ಆಸಕ್ತಿಯುಳ್ಳ ರೈತರು, ಮಹಿಳೆಯರು, ನಿರುದ್ಯೋಗಿ ಯುವಕ, ಯುವತಿಯರು ತರಬೇತಿ ಪಡೆಯಬಹುದಾಗಿದೆ.

ತರಬೇತಿ ಪಡೆಯಲು 30 ಜನರಿಗೆ ಅವಕಾಶವಿದ್ದು, ತರಬೇತಿಗೆ ಹಾಜರಾಗುವವರು ಆಧಾರ್ ಕಾರ್ಡ್ ಜೆರಾಕ್ಸ್, 2 ಪಾಸ್‍ಪೋರ್ಟ್ ಸೈಜಿನ ಫೋಟೋ ಹಾಗೂ ಪ.ಜಾತಿ, ಪ.ಪಂಗಡದವರು ಜಾತಿ ಪ್ರಮಾಣ ಪತ್ರದ ಜೆರಾಕ್ಸ್ ಪ್ರತಿ ನೀಡಬೇಕು. ಹೆಚ್ಚಿನ ಮಾಹಿತಿಗಾಗಿ ಪಶು ವೈದ್ಯಕೀಯ ಸಹಾಯಕರ ತರಬೇತಿ ಕೇಂದ್ರದ ದೂರವಾಣಿ ಸಂಖ್ಯೆ: 08192-233787 ಸಂರ್ಪಕಿಸಬಹುದೆಂದು ವೈದೈಕೀಯ ಸಹಾಯಕರ ತರಬೇತಿ ಕೇಂದ್ರದ ಮುಖ್ಯ ಪಶುವೈದ್ಯಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

 

 

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

Advertisement Enter ad code here
Advertisement

ದಾವಣಗೆರೆ

Advertisement

ಪ್ರಮುಖ ಸುದ್ದಿ

News

Advertisement
Advertisement e

namma davanagere

ಸಿದ್ದನೂರು ಮತ್ತು ಅಗಸನಕಟ್ಟೆಯ ನಿಕ್ರಾ ಯೋಜನೆಯ ದೃಶ್ಯಾವಳಿ

Advertisement
To Top