ದಾವಣಗೆರೆ: ಚಲಿಸುತ್ತಿದ್ದ ವಿಶ್ವಮಾನವ ರೈಲಿನಲ್ಲಿ ದಾವಣಗೆರೆ ಕಡೆ ಪ್ರಯಾಣ ಬೆಳೆಸುತ್ತಿದ ಏಳು ತಿಂಗಳ ಗರ್ಭಿಣಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಹೊಳಲ್ಕೆರೆ ತಾಲ್ಲೂಕಿನ ರಾಮಗಿರಿ ಬಳಿ ರೈಲಿನಲ್ಲಿಯೇ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
ಶಾಮನೂರು ಶಿವಶಂಕರಪ್ಪ ಶಿವಗಣಾರಾಧನೆ; ದಾವಣಗೆರೆ ಇತಿಹಾಸದಲ್ಲೇ ದೊಡ್ಡ ಮಟ್ಟದ ನುಡಿನಮನ ಸಕಲ ಸಿದ್ಧತೆ
ಹರಪನಹಳ್ಳಿ ತಾಲ್ಲೂಕಿನ ಕ್ಯಾರಕಟ್ಟೆ ಗ್ರಾಮದ ನಾಗಮ್ಮ ಪ್ರಕಾಶ್ (26) ಮಗುವಿಗೆ ಜನ್ಮನೀಡಿದ ಮಹಿಳೆ. ಹೊಳಲ್ಕೆರೆ ತಾಲ್ಲೂಕಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ತಾಯಿ-ಮಗು ಆರೋಗ್ಯವಾಗಿದ್ದಾರೆ ಎಂದು ದಾವಣಗೆರೆ ರೈಲ್ವೆ ಪೊಲೀಸರು ತಿಳಿಸಿದ್ದಾರೆ.
ಶುಕ್ರವಾರ ಶಾಮನೂರು ಶಿವಶಂಕರಪ್ಪ ಕೈಲಾಸ ಸಮಾರಾಧನೆ; ಸಂಚಾರ ಮಾರ್ಗದಲ್ಲಿ ಬದಲಾವಣೆ
ಚಿಕ್ಕಮಗಳೂರು ಜಿಲ್ಲೆಯ ಕಾಫಿ ಎಸ್ಟೇಟ್‌ನಲ್ಲಿ ಕೆಲಸ ಮಾಡುತ್ತಿದ್ದ ನಾಗಮ್ಮ, ಏಳು ತಿಂಗಳ ಗರ್ಭಿಣಿಯಾಗಿದ್ದರು. ಪತಿ ಪ್ರಕಾಶ್ ಅವರೊಂದಿಗೆ ಹೆರಿಗೆಗೆ ಸೋಮವಾರ ಗ್ರಾಮಕ್ಕೆ ಮರಳುತ್ತಿದ್ದರು. ಕಡೂರಿನಿಂದ ವಿಶ್ವಮಾನವ ರೈಲು ಏರಿದ ದಂಪತಿ ದಾವಣಗೆರೆಯತ್ತ ಪ್ರಯಾಣ ಬೆಳೆಸಿದ್ದರು. ಹೊಳಲ್ಕೆರೆ ತಾಲ್ಲೂಕಿನ ರಾಮಗಿರಿ ಸಮೀಪ ಹೆರಿಗೆ ನೋವು ಕಾಣಿಸಿಕೊಂಡಿದೆ. ಆಗ, ರೈಲಿನಲ್ಲಿ ಮಗುವಿಗೆ ಜನ್ಮ ನೀಡಿದ್ದಾರೆ.
ದಾವಣಗೆರೆ: ಮತ್ತೆ 57 ಸಾವಿರ ಗಡಿದಾಟಿದ ಅಡಿಕೆ ದರ | ಇಂದಿನ ಕನಿಷ್ಠ, ಗರಿಷ್ಠ ದರ ಎಷ್ಟಿದೆ..?
ರೈಲಿನಲ್ಲಿ ಕರ್ತವ್ಯದಲ್ಲಿದ್ದ ಸವಿತಾ ಎಚ್.ಬಿ., ವೃದ್ಧೆ ಮತ್ತು ಪ್ರಯಾಣಿಕರ ಸಹಕಾರದಿಂದ ರೈಲಿನಲ್ಲಿ ಹೆರಿಗೆಯಾದ ಮಾಹಿತಿಯನ್ನು ಚಿಕ್ಕಜಾಜೂರು ರೈಲು ನಿಲ್ದಾಣಕ್ಕೆ ತಲುಪಿಸಿದ ಪೊಲೀಸರು, ಮಹಿಳೆಯನ್ನು ತಕ್ಷಣ ಆಸ್ಪತ್ರೆಗೆ ರವಾನಿಸಿದ್ದಾರೆ. ತಾಯಿ-ಮಗು ಆರೋಗ್ಯವಾಗಿದ್ದಾರೆ.



