ದಾವಣಗೆರೆ: ಇತ್ತೀಚೆಗೆ ಸರ್ಕಾರಿ ಹೆರಿಗೆ ಆಸ್ಪತ್ರೆಯಲ್ಲಿ ನಾಪತ್ತೆಯಾಗಿದ್ದ ಗಂಡು ಮಗು ಪತ್ತೆಯಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ ಗೌರಮ್ಮ ಅವರನ್ನು ಹೈಸ್ಕೂಲ್ ಮೈದಾನದ ವ್ಯಾಪಾರಿಗಳು ಸನ್ಮಾನಿಸಿದರು.
20 ದಿನದ ನಂತರ ಮಗು ನಗರದ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣದ ವೃದ್ಧೆ ಬಳಿ ಮಗು ಪತ್ತೆಯಾಗಿತ್ತು. ವೃದ್ಧೆ ಗಂಡು ಮಗುವನದನು ಪೊಲೀಸರಿಗೆ ನೀಡಿದ್ದರು. ಈ ಪ್ರಕರಣ ಜಿಲ್ಲೆಯಲ್ಲಿ ಸಂಚಲನ ಮೂಡಿಸಿತ್ತು. ಇದೀಗ ಕಳುವಾಗಿದ್ದ ಮಗು ತಾಯಿ ಮಡಿಲು ಸೇರಲು ಸಹಕಾರಿಯಾದ ಗೌರಮ್ಮಗೆ ಇಂದು ಸನ್ಮಾನಿಸಲಾಯಿತು.
ಏಪ್ರಿಲ್ 6ರಂದು ದಾವಣಗೆರೆ ಬಸ್ ನಿಲ್ದಾಣದಲ್ಲಿ ಅಪರಿಚಿತ ಮಹಿಳೆಯೊಬ್ಬಳು ಮಗುವನ್ನ ಗೌರಮ್ಮನ ಕೈಗೆ ಕೊಟ್ಟು ಪರಾರಿ ಆಗಿದ್ದಳು. ದಾವಣಗೆರೆಯಲ್ಲಿ ಮಗು ಅಪಹರಣ ಆದ ಬಗ್ಗೆ ತಿಳಿದಿದ್ದ ಗೌರಮ್ಮ ನೇರವಾಗಿ ಮಗುವನ್ನ ಪೊಲೀಸರಿಗೆ ಒಪ್ಪಿಸಿದ್ದರು.
ಮಾರ್ಚ್ 16, 2022 ರಂದು ವಿಜಯನಗರ ಜಿಲ್ಲೆಯ ಹರಪನಹಳ್ಳಿಯ ಉಮೇಸಲ್ಮಾ ಎಂಬ ಮಹಿಳೆಗೆ ಹೆರಿಗೆಗಾಗಿ ದಾವಣಗೆರೆ ನಗರದ ಕೆಆರ್ ಮಾರ್ಕೆಟ್ ಬಳಿ ಇರುವ ಸರ್ಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಗೆ ದಾಖಲಾಗಿದ್ದರು. ಸಂಜೆ ನಾಲ್ಕು ಗಂಟೆಗೆ ಹೆರಿಗೆ ಆಗಿ ಗಂಡು ಮಗುವಿಗೆ ಜನ್ಮ ನೀಡಿದ್ದಳು. ಸಂಜೆ ಆರು ಗಂಟೆಗೆ ಮಗು ನಾಪತ್ತೆ ಆಗಿತ್ತು. ಚೂಡಿ ಹಾಕಿ ತಲೆಗೆ ಬಿಳಿ ಸ್ಕಾರ್ಫ್ ಹಾಕಿದ್ದ ಮಹಿಳೆ ಮಗು ಅಪರಿಸಿದ್ದಳು. ಆದ್ರೆ ಈ ಪ್ರಕರಣ ಪತ್ತೆ ಆಗಲು 20 ದಿನ ಬೇಕಾಯಿತು. ಏಪ್ರಿಲ್ 6 ರಂದು ಮಗು ಪತ್ತೆ ಆಗಿತ್ತು. ಆದ್ರೆ ಆರೋಪಿ ಮಾತ್ರ ಸಿಕ್ಕಿರಲಿಲ್ಲ. ಮರುದಿನ ದಾವಣಗೆರೆ ಆಜಾದ್ ನಗರದ 12ನೇ ಕ್ರಾಸ್ ನಿವಾಸಿ ಗುಲ್ಜಾರ್ ಭಾನು ಮಗು ಕದ್ದು ಮಕ್ಕಳಿಲ್ಲದೆ ನೋವು ಅನುಭವಿಸುತ್ತಿದ್ದ ಬೆಂಗಳೂರಿನಲ್ಲಿ ಇದ್ದ ತನ್ನ ಮಗಳಿಗೆ ಕೊಟ್ಟಿದ್ದ ಬಗ್ಗೆ ಪೊಲೀಸ್ ತನಿಖೆಯಿಂದ ಮಾಹಿತಿ ಸಿಕ್ಕಿತ್ತು. ಆದ್ರೆ ಆರೋಪಿ ಗುಲ್ಜಾರ್ ಭಾನು ಮಗಳು ಗೌರಮ್ಮ ಕೈಗೆ ಮಗು ಕೊಟ್ಟು ಪರಾರಿ ಆಗಿದ್ದರು.
ಜಿಲ್ಲಾ ಪೊಲೀಸ್ ಗೆ ಪ್ರಕರಣ ಭೇದಿಸುವುದು ದೊಡ್ಡ ತಲೆ ನೋವಾಗಿತ್ತು. ಹೀಗಾಗಿ ಆರೋಪಿ ಸುಳಿವು ನೀಡಿದವರಿಗೆ 25 ಸಾವಿರ ಬಹುಮಾನ ನೀಡುವುದಾಗಿ ಘೋಷಣೆ ಮಾಡಿತ್ತು. ಹೀಗಾಗಿ ಗೌರಮ್ಮನಿಗೆ ಪೊಲೀಸ್ ಇಲಾಖೆ 25 ಸಾವಿರ ರೂಪಾಯಿ ಬಹುಮಾನ ನೀಡಿಲಿ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.



