ದಾವಣಗೆರೆ: ದಾವಣಗೆರೆ ನಗರದಲ್ಲಿಂದು ಸಂಜೆ ಗುಡುಗು-ಗಾಳಿ ಸಹಿತ ಮಳೆಯಾಗಿದ್ದು, ಬಿಸಿಲಿನ ತಾಪಮಾನದಿಂದ ಕಂಗೆಟ್ಟಿದ್ದ ಬೆಣ್ಣೆನಗರಿ ತಂಪಾಗಿದೆ.
ದಿನದಿಂದ ದಿನಕ್ಕೆ ತಾಪಮಾನ ಏರಿಕೆಯಾಗುತ್ತಿದ್ದು, ಮಧ್ಯಾಹ್ನ ಬಿಸಿಲಿಗೆ ಜನರು ಕಂಗಲಾಗಿದ್ದರು. ಇಂದು ಸಂಜೆ ನಗರದಲ್ಲಿ ಸುರಿದ ಮಳೆ, ಬಿಸಿಲಿನಿಂದ ಬಿಸಿಲಿನ ತಾಪಮಾನದಿಂದ ಕಂಗೆಟ್ಟಿದ್ದ ಜನರಿಗೆ ತಂಪೆರೆದಂತಾಗಿದೆ. ನಗರದ ಹದಡಿ ರಸ್ತೆ, ಪಿಬಿ ರಸ್ತೆ, ಆವರಗೆರೆ , ಬಾತಿ, ಕೊಂಡಜ್ಜಿ ರಸ್ತೆ, ವಿದ್ಯಾನಗರ, ತರಳಬಾಳು ಬಡಾವಣೆ, ದೇವರಾಜ ಅರಸು ಬಡಾವಣೆ, ಕೆ.ಬಿ ಬಡಾವಣೆ, ಪಿಜೆ ಬಡಾವಣೆ, ಡಿಸಿಎಂ ಲೇಔಟ್ ಸೇರಿದಂತೆ ಅನೇಕ ಕಡೆ ಮಳೆಯಾಗಿದೆ.