ದಾವಣಗೆರೆ: ದುಷ್ಕರ್ಮಿಗಳು ಕೆರೆಗೆ ವಿಷ ಹಾಕಿರುವ ಶಂಕೆ ವ್ಯಕ್ತವಾಗಿದೆ. ಹೀಗಾಗಿ ಕೆರೆಯಲ್ಲಿ ನೂರಾರು ಮೀನುಗಳ ಮಾರಣಹೋಮ ಹೊಂದಿರುವ ಘಟನೆ ಚಿಕ್ಕರಿಕೆರೆ ಗ್ರಾಮದಲ್ಲಿ ನಡೆದಿದೆ.
ಜಿಲ್ಲೆಯ ಜಗಳೂರು ತಾಲೂಕಿನ ಚಿಕ್ಕರಿಕೆರೆ ಗ್ರಾಮದಲ್ಲಿ ನಡೆದಿದ್ದು, ಮೀನುಗಳು ಸಾವಿನಿಂದ ಸುತ್ತಲಿನ ಪ್ರದೇಶದಲ್ಲಿ ಕೆಟ್ಟ ವಾಸನೆ ಬರುತ್ತಿದೆ. ನಿನ್ನೆ ಸಂಜೆ ಕೆರೆಗೆ ವಿಷ ಹಾಕಿರುವ ಶಂಕೆವಾಗಿದ್ದು, ಕೆರೆಯಲ್ಲಿ ಮೀನುಗಳು ಸತ್ತು ತೇಲಾಡುತ್ತಿವೆ. ಕೂಡಲೇ ಎಚ್ಚತ್ತುಕೊಂಡ ಗ್ರಾಮಸ್ಥರು ಜನ ಜಾನುವಾರು ಕೆರೆ ಕಡೆ ಬರದಂತೆ ತಡೆದಿದ್ದಾರೆ.
ಸಣ್ಣ ನೀರಾವರಿ ಇಲಾಖೆಯಿಂದ ಮೀನು ಸಾಗಾಣಿಕೆ ಗುತ್ತಿಗೆ ಪಡಿದ ವ್ಯಕ್ತಿಗಳಿಗೆ ಲಕ್ಷಾಂತರು ರೂಪಾಯಿ ನಷ್ಟವಾಗಿದೆ. ಜಗಳೂರು ಪೊಲೀಸ್ ಠಾಣೆಗೆ ಗ್ರಾಮಸ್ಥರು ದೂರು ನೀಡಿದ್ದು, ಆರೋಪಿಗಳ ಪತ್ತೆಗೆ ಆಗ್ರಹಿಸಿದ್ದಾರೆ.



