ದಾವಣಗೆರೆ: ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕದ ವತಿಯಿಂದ ನಗರದ ಗಡಿಯಾರ ಕಂಬದ ಬಳಿ ಕೊರೊನಾ ಜಾಗೃತಿ ಹಾಗೂ ಮಾಸ್ಕ್ ವಿತರಿಸಿ ಜನರಲ್ಲಿ ಅರಿವು ಮೂಡಿಸಲಾಯಿತು.

ರಸ್ತೆ ಬದಿ ವ್ಯಾಪಾರಿಗಳು, ಆಟೋ ಚಾಲಕರು, ಸಾರ್ವಜನಿಕರಿಗೆ ಉಚಿತವಾಗಿ ಮಾಸ್ಕ್ ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಅದ್ಯಕ್ಷ ದೇವರಮನಿ ಶಿವಕುಮಾರ್, ಮಹಾನಗರ ಪಾಲಿಕೆ ಸದಸ್ಯರಾದ ಶಿವನಗೌಡ ಟಿ ಪಾಟೀಲ್, ಟಿಂಕರ್ ಮಂಜಣ್ಣ, ಕರಿವಪ್ಳರ ಸಿದ್ದೇಶ್, ಮಾಗಿ ಪ್ರಕಾಶ್, ಶೀಕಾಂತ್ ನಿಲಗುಂದ, ಅಭಿಷೇಕ್ ಪಿ.ಎಳೆಹೋಳೆ, ಶಿವಾನಂದ ಬೆನ್ನುರ್, ದೆವೇಂದ್ರಪ್ಪ, ಮಹಿಳಾ ಘಟಕದ ಶೋಭಾ ಕೊಟ್ರೇಶ್, ಪುಷ್ಪಾ ವಾಲಿ, ದ್ರಾಕ್ಷಯಾಣಿ, ಕವಿತಾ, ಸುಮಂಗಲಾ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.



