ದಾವಣಗೆರೆ: ದಾವಣಗೆರೆ ಮಹಾನಗರ ಪಾಲಿಕೆ ವತಿಯಿಂದ ಸಾರ್ವಜನಿಕರಿಗೆ ಆಸ್ತಿ ತೆರಿಗೆ, ನೀರು, ಯುಜಿಡಿ ಕಂದಾಯವನ್ನು ಶೇ. 5 ರಷ್ಟು ರಿಯಾಯಿತಿಯಿಂದಿಗೆ ಏಪ್ರಿಲ್ ತಿಂಗಳೊಳಗೆ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ. ಆನ್ ಲೈನ್ ಮೂಲಕ ಮನೆಯಿಂದಲೇ ಪಾವತಿ ಮಾಡಬಹುದು.
ಸಾ್ವಜನಿಕರು ಆನ್ ಲೈನ್ ತೆರಿಗೆ ಪಾವತಿ ಮಾಡಲು www.davanagerecitycorp.org ಈ ವೆಬ್ ಲಿಂಕ್ ಬಳಸಿಕೊಳ್ಳಬೇಕು. ಏಪ್ರಿಲ್ ತಿಂಗಳೊಳಗೆ ತೆರಿಗೆ ಪಾವತಿ ಮಾಡಿದ ಸಾರ್ವಜನಿಕರಿಗೆ ಶೇ.5ರಷ್ಟು ರಿಯಾಯಿತಿ ಸಿಗಲಿದೆ. ಸಾರ್ವಜನಿಕರು ಕೇಂದ್ರ, ವಲಯ ಕಚೇರಿಯಲ್ಲಿಯೂ ಸಹ ತೆರಿಗೆ ಪಾವತಿಸಬಹುದು. ಏಪ್ರಿಲ್ ನಲ್ಲಿ ಶೇ. 5ರಷ್ಟು ರಿಯಾಯಿತಿ, ಮೇ, ಜೂನ್ ನಲ್ಲಿಬಯಾವುದೇ ರಿಯಾಯಿತಿ ಇರಲ್ಲ. ಜುಲೈ ತಿಂಗಳಿಂದ ತೆರಿಗೆ ಪಾವತಿ ಮಾಡಿದ್ರೆ ಶೇ. 2 ರಷ್ಟು ದಂಡ ವಿಧಿಲಾಗುವುದು ಎಂದು ಪಾಲಿಕರ ಆಯುಕ್ತೆ ರೇಣುಕಾ ತಿಳಿಸಿದ್ದಾರೆ. ಇನ್ನೂ ಈ ಬಾರಿ ನೀರಿನ ಅಭಾವ ಇರುವುದರಿಂದ ನೀರನ್ನು ಮಿತವಾಗಿ ಬಳಸಿ ಎಂದು ಮನವಿ ಮಾಡಿಕೊಂಡಿದ್ದಾರೆ.



