Connect with us

Dvgsuddi Kannada | online news portal | Kannada news online

ಹಿಂಗಾರು ಹಂಗಾಮಿನಯಲ್ಲಿ ರೈತರು ಗಮನಿಸಬೇಕಾದ ಕೆಲವು ಸಲಹೆಗಳು

ಪ್ರಮುಖ ಸುದ್ದಿ

ಹಿಂಗಾರು ಹಂಗಾಮಿನಯಲ್ಲಿ ರೈತರು ಗಮನಿಸಬೇಕಾದ ಕೆಲವು ಸಲಹೆಗಳು

  • ಶೇಂಗಾ ಬಿತ್ತಲು ಸಕಾಲ. ತಡವಾದಂತೆ.. ಸಮಸ್ಯೆ ಉಂಟು. ಬೀಜೋಪಚಾರ; ಟ್ರೈಕೋಡರ್ಮಾ ಸಂವರ್ಧಿತ ಕೊಟ್ಟಿಗೆ ಗೊಬ್ಬರ, ಜಿಜಿಂಬೋ (ಜಿಪ್ಸಂ, ಜಿಂಕ್,ಬೋರಾನ್) ಬಳಕೆ ಅತ್ಯಗತ್ಯ.
  • ನೀರಾವರಿಯಲ್ಲಿ ಗೋಧಿ ಬಿತ್ತನೆಗೆ ಸಕಾಲ. ಎಕರೆಗೆ 60 ಕೆಜಿ ಬೀಜ ಒಮ್ಮುಖ ಬಿತ್ತನೆ, ಬೀಜೋಪಚಾರ, ಸಮಗ್ರ ಪೋಷಕಾಂಶಗಳ ನಿರ್ವಹಣೆ ಅತ್ಯಗತ್ಯ.
  • ನೀರಾವರಿಯಲ್ಲಿ ಕಡಲೆ ಬಿತ್ತುವುದು ಲಾಭದಾಯಕ. ಅಗತ್ಯ ಸಲಹೆ ಪಡೆಯ‌ಬಯಸುವವರಿಗೆ ಸದಾ ಸ್ವಾಗತ.
  • ಹೆಸರು, ಉದ್ದು, ಅಲಸಂದೆ ಸೋಯಾ ಅವರೆ ಈಗ ಬಿತ್ತಬಾರದು.
  • ತಿಂಗಳವರೆ, ಕ್ಷೇತ್ರ ಅವರೆ ಬಿತ್ತನೆಗೆ ಸಕಾಲ.
  • ಹಿಂಗಾರಿ ಜೋಳದಲ್ಲಿ ಸುಳಿ ನೊಣ, ಚುಕ್ಕೆ ಲದ್ದಿ ಹುಳು, ಹತೋಟಿ ಬಗ್ಗೆ ಆದ್ಯತೆ ಇರಲಿ.
  • ಎಡೆ ಹೊಡೆದು ಬೀಡು ಮುಚ್ಚುವುದು ಅತ್ಯಗತ್ಯ.
  • ಕೂಳೆ ಕಬ್ಬು ಮಾಡುವವರು.. ರೋಗ ಬಾಧಿತ ಬುಡ ಕಿತ್ತು ಹಾಕಿ. ಸಾಗುಣಿ (ಗ್ಯಾಪ್) ಇದ್ದಲ್ಲಿ (ಕ್ಷೇತ್ರದ ಅಂಚಿನ ಸಾಲಗಳ ಬುಡ ಕಿತ್ತು ) ಅವುಗಳನ್ನು ತುಂಬಿರಿ. ಸೋಗೆ (ರವುದಿ) ಸುಡದೇ ಜಿಜಿಂಬೋ (ಜಿಪ್ಸಂ, ಜಿಂಕ್, ಬೋರಾನ್) ಬೆರೆಸಿ ಟ್ರ್ಯಾಶ್ ಕಟರ್ ಬಳಸಿ ಮುಚ್ಚಿಗೆ ಮಾಡಿ. ಗ್ಯಾಪ್ ತುಂಬದಿದ್ದಲ್ಲಿ ಕುಳೆ ಬೆಳೆ ಇಳುವರಿ ಕಡಿಮೆಯಾಗುವುದು. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ : 9449082829

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top
(adsbygoogle = window.adsbygoogle || []).push({});