ದಾವಣಗೆರೆ: 2022-23ನೇ ಸಾಲಿನ ಪಾಲಿಕೆ ಸಾಮಾನ್ಯನಿಧಿ ಹಾಗೂ ಎಸ್.ಎಫ್.ಸಿ ಅನುದಾನದಲ್ಲಿ ಕಾಯ್ದಿರಿಸಿದ ಶೇ.24.10ರ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಹಾಗೂ ಶೇ.7.25 ಇತರೆ ಸಮುದಾಯದ ಕಾರ್ಯಕ್ರಮಗಳಡಿ ವಿವಿಧ ಸೌಲಭ್ಯಗಳನ್ನು ಪಡೆಯಲು ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
www.davanagerecity.gov.in ವೆಬ್ ಸೈಟ್ ತಾಣದಿಂದ ಅರ್ಜಿ ಪಡೆದುಕೊಂಡು ಅಗತ್ಯ ದಾಖಲೆಗಳೊಂದಿಗೆ ಇದೇ ಡಿಸೆಂಬರ್ 19 ರೊಳಗಾಗಿ ಮಹಾನಗರಪಾಲಿಕೆ ಕಚೇರಿಯ ಸಾರ್ವಜನಿಕ ಕುಂದುಕೊರತೆ ವಿಭಾಗ( ನಗರ ಬಡತನ ನಿವಾರಣ ಕೋಶ ಎಸ್.ಜೆ.ಎಸ್ ಆರ್.ವೈ ಕಟ್ಟಡ)ಕ್ಕೆ ಅರ್ಜಿ ಸಲ್ಲಿಸಲು ಮಹಾನಗರಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ಕೋರಿದ್ದಾರೆ.



