ದಾವಣಗೆರೆ: ದಾವಣಗೆರೆ ಸ್ಮಾರ್ಟ್ ಸಿಟಿ ಲಿಮಿಟೆಡ್ ವತಿಯಿಂದ ಆಜಾದಿ ಕಾ ಅಮೃತ್ ಮಹೋತ್ಸವ ಕಾರ್ಯಕ್ರಮದ ಅಂಗವಾಗಿ ಗುರುಭವನ ರಸ್ತೆಯಲ್ಲಿ ಗೋಡೆಗಳ ಮೇಲೆ ದೇಶಭಕ್ತಿ ಸಾರುವಂತಹ ಚಿತ್ರಕಲೆಗಳನ್ನು ರಚಿಸುವವರಿಗೆ ಮುಕ್ತ ಅವಕಾಶ ಕಲ್ಪಿಸಲಾಗಿದೆ.
ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಆಜಾದಿ ಕಾ ಅಮೃತ್ ಮಹೋತ್ಸವದ ನಿಮಿತ್ತ ಇಂದಿನಿಂದ ( ಸೆ.29) 01 ರವರೆಗೆ 3 ದಿನಗಳು ವಿವಿಧ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು, ಕಾರ್ಯಕ್ರಮದ ಅಂಗವಾಗಿ ಗುರುಭವನ ರಸ್ತೆಯಲ್ಲಿ ದೇಶ ಭಕ್ತಿ ಸಾರುವಂತಹ ಚಿತ್ರಕಲೆಗಳನ್ನು ಗೋಡೆಗಳ ಮೇಲೆ ರಚಿಸುವವರಿಗೆ ಮುಕ್ತ ಅವಕಾಶ ಕಲ್ಪಿಸಲಾಗಿದ್ದು, ಆಸಕ್ತಿವುಳ್ಳವರು ಈ 3 ದಿನಗಳ ಕಾರ್ಯಕ್ರಮವನ್ನು ಸದುಪಯೋಗಪಡಿಸಿಕೊಂಡು ದೇಶ ಸೇವೆ ಸಮರ್ಪಿಸಬಹುದು ಎಂದು ದಾವಣಗೆರೆ ಸ್ಮಾರ್ಟ್ ಸಿಟಿ ಲಿಮಿಟೆಡ್‍ನ ವ್ಯವಸ್ಥಾಪಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.