ದಾವಣಗೆರೆ: ಕೆರೆಯಲ್ಲಿ ಈಜಲು ಹೋಗಿ ಸಹೋದರರಿಬ್ಬರು ನೀರುಪಾಲಾದ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಬೆಂಕಿಕೆರೆ ಗ್ರಾಮದ ಕೆರೆಯಲ್ಲಿ ನಡೆದಿದೆ.
ಮಂಜುನಾಥ್ (15) ಹಾಗೂ ನವೀನ್ (13) ಎಂಬವರು ನೀರುಪಾಲಾಗಿದ್ದಾರೆ. ಹತ್ತರಿಂದ ಹದಿನೈದು ಬಾಲಕರು ಕೆರೆಗೆ ಈಜಲು ಹೋಗಿದ್ದರು. ಈ ವೇಳೆ ಅವಘಡ ಸಂಭವಿಸಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಸಹೋದರರ ಶವ ಹೊರತೆಗೆದಿದ್ದಾರೆ. ಚನ್ನಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.