Connect with us

Dvgsuddi Kannada | online news portal | Kannada news online

ಕೊಡಲಿಯಿಂದ ತಮ್ಮನಿಂದಲೇ ಅಣ್ಣನ ಹತ್ಯೆ

ಕ್ರೈಂ ಸುದ್ದಿ

ಕೊಡಲಿಯಿಂದ ತಮ್ಮನಿಂದಲೇ ಅಣ್ಣನ ಹತ್ಯೆ

 ಡಿವಿಜಿ ಸುದ್ದಿ, ಹಾವೇರಿ : ಅಣ್ಣ-ತಮ್ಮನ ಜಗಳಾ ವಿಕೋಪಕ್ಕೆ ಹೋಗಿ, ತಮ್ಮನೇ ಅಣ್ಣನನ್ನು ಕೊಡಲಿಯಿಂದ ಕೊಚ್ಚಿ ಬರ್ಬರವಾಗಿ ಹತ್ಯೆ  ಮಾಡಿರುವ ಘಟನೆ ಹಾವೇರಿ ಜಿಲ್ಲೆಯ ಬ್ಯಾಡಗಿ ತಾಲೂಕಿನಲ್ಲಿ ನಡೆದಿದೆ.

ತಾಲೂಕಿನ ಬುಡಪನಹಳ್ಳಿ ಗ್ರಾಮದ ನಾಗರಾಜ ಗೊರವರ(22) ಹತ್ಯೆಯಾದ ಯುವಕನಾಗಿದ್ದಾನೆ.  ಈತನ ತಮ್ಮ ದಿಳ್ಳೆಪ್ಪ ಗೊರವರ (20) ಕೊಲೆ ಮಾಡಿದ್ದಾನೆ. ನಾಗರಾಜ ದಿನನಿತ್ಯ ಕುಡಿದು ಬಂದು ತಂದೆ-ತಾಯಿ ಜೊತೆ ಜಗಳವಾಡುತ್ತಿದ್ದನು. ಇದರಿಂದ ಜಗಳ ವಿಕೋಪಕ್ಕೆ ಹೋಗಿ ಕೊಡಲಿಯಿಂದ ಕೊಚ್ಚಿ ಹತ್ಯೆ ಮಾಡಿದ್ದಾನೆ ಎನ್ನಲಾಗಿದೆ.

ಸದ್ಯ ಅಣ್ಣನ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತಮ್ಮ ದಿಳ್ಳೆಪ್ಪನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಘಟನೆ ಬ್ಯಾಡಗಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

 

Dvgsuddi.com is a live Kannada news portal. Kannada news online. political, information, crime, film, Sports News in Kannada ಡಿವಿಜಿಸುದ್ದಿ. ಕಾಂ ‌ಆನ್ ಲೈನ್ ನ್ಯೂಸ್ ಪೋರ್ಟಲ್‌ ಆಗಿದ್ದು, ಸ್ಥಳೀಯ (ದಾವಣಗೆರೆ) ಸುದ್ದಿ ಜೊತೆ ಇನ್ಫೋರ್ಮೆಟಿವ್ ಸುದ್ದಿ‌ ಕೊಡುವುದು ಮೊದಲ ಆದ್ಯತೆ. ಸ್ಥಳೀಯ ಸುದ್ದಿ, ರಾಜಕೀಯ, ಶಿಕ್ಷಣ, ಸಿನಿಮಾ, ಕ್ರೀಡೆ ಜೊತೆ ರೈತರಿಗೆ ಉಪಯುಕ್ತ ಮಾಹಿತಿ ನೀಡಲಾಗುವುದು. Editor: munikondajji, MA journalism, contact number:7483892205, e-mail: dvgsuddi@gmail.com

Click to comment

Leave a Reply

Your email address will not be published. Required fields are marked *

More in ಕ್ರೈಂ ಸುದ್ದಿ

To Top