ಹರಿಹರ: ಕುಡಿಯಲು ಹಣ ನೀಡದ ಪತ್ನಿಯನ್ನು ಪತಿರಾಯ ಕೊಲೆ ಮಾಡಿದ ದುರ್ಘಟನೆ ಹರಿಹರ ತಾಲೂಕಿನ ಅಮರಾವತಿ ಗ್ರಾಮದಲ್ಲಿ ನಡೆದಿದೆ.
ಅಮರಾವತಿ ಗ್ರಾಮದ ನಿವಾಸಿ 50 ವರ್ಷದ ಗೃಹಿಣಿ ಸೌಭಾಗ್ಯಮ್ಮ ಕೊನೆಯುಸಿರೆಳೆದ ನತದೃಷ್ಟೆ. 55 ವರ್ಷದ ಮರಿಯಪ್ಪ ಪತ್ನಿಯನ್ನೇ ಕೊಲೆ ಮಾಡಿದ್ದಾನೆ.ಕುಡಿತದ ಚಟಕ್ಕೆ ದಾಸನಾಗಿದ್ದ ಪತಿ ಊರು ಬಿಟ್ಟು ಹೋಗಿದ್ದ. ನಾಲ್ಕು ಮಕ್ಕಳ ಮದುವೆ ಮಾಡಬೇಕು ಎಂಬ ಕಾರಣಕ್ಕೆ ಕುಡುಕ ಪತಿಯನ್ನು ಮನೆಗೆ ಕರೆತಂದಿದ್ದರು.ಆದರೆ, ಈತನಿಗೆ ಕುಡಿತದ ಚಟ ಹೋಗಿರಲಿಲ್ಲ.
ತಂದೆ ಮನೆಯಲ್ಲಿ ಇದ್ದರೆ ಸಾಕು ಎಂದು ಮಕ್ಕಳು ಎಲ್ಲ ರೀತಿಯ ಅನುಕೂಲ ಮಾಡಿಕೊಟ್ಟಿದ್ರು. ಆದರೂ ಆತ ಪತ್ನಿಯನ್ನು ಹಣಕ್ಕಾಗಿ ಪೀಡಿಸುವುದನ್ನು, ಇಂದು ಬೆಳಗ್ಗೆ ಮಕ್ಕಳೆಲ್ಲಾ ಹೊರಗೆ ಹೋಗಿದ್ದಾಗ, ಪತ್ನಿಯೊಂದಿಗೆ ಜಗಳ ತೆಗೆದಿದ್ದ. ಜಗಳ ತಾರಕ್ಕೇರಿ ಮನೆಯಲ್ಲಿ ಚಾಕುವಿನಿಂದ ಪತ್ನಿಯ ಕುತ್ತಿಗೆ ಕೊಯ್ದು ಕೊಲೆ ಮಾಡಿದ್ದಾನೆ. ಅಕ್ಕಪಕ್ಕ ಮನೆಯವರೆಲ್ಲಾ ಸೇರಿ ಕೊಲೆಗಾರ ಮರಿಯಪ್ಪನ್ನು ಹಿಡಿದು ಪೊಲೀಸರಿಗೆ ಹಾಗೂ ಮಾಹಿತಿ ನೀಡಿದ್ರು. ಮನೆಗೆ ಬಂದ ಮಕ್ಕಳು ತಾಯಿಯನ್ನು ಕೊಂದ ತಂದೆಯ ಮೇಲೆ ಹಲ್ಲೆ ಮಾಡಿದ್ದಾರೆ.
ಘಟನಾ ಸ್ಥಳಕ್ಕೆ ಎಸ್ಪಿ, ಎಎಸ್ಪಿ ಸೇರಿದಂತೆ ಪೊಲೀಸರ ತಂಡ ಆಗಮಿಸಿ ಪರಶೀಲನೆ ನಡೆಸಿದೆ. ಗಾಯಗೊಂಡ ಮರಿಯಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.



