ಬೆಂಗಳೂರು : ಕೇಂದ್ರ ಸರ್ಕಾರವು ಪಡಿತರ ಚೀಟಿದಾರರಿಗೆ ಕೊರನಾ ಹಿನ್ನೆಲೆ ಕೇಂದ್ರ ಸರ್ಕಾರ ಗರೀಬ್ ಕಲ್ಯಾಣ್ ಯೋಜನೆಯಡಿ ಕಳೆದ ಏಳು ತಿಂಗಳಿನಿಂದ ನೀಡುತ್ತಿದ್ದ, ಉಚಿತ ಪಡಿತರ ಅಕ್ಕಿ ನವೆಂಬರ್ 30 ಕ್ಕೆ ಅಂತ್ಯಗೊಳ್ಳಲಿದೆ.
ಕೇಂದ್ರ ಸರ್ಕಾರವು ಕಳೆದ ಏಪ್ರಿಲ್ ನಿಂದ ಪಡಿತರ ಚೀಟಿ ಹೊಂದಿರುವ ರಾಜ್ಯದ ಎಲ್ಲ ಫಲಾನುಭವಿಗಳಿಗೆ ತಲಾ 5 ಕೆಜಿ ಅಕ್ಕಿ ಮತ್ತು ಕಟುಂಬವೊಂದಕ್ಕೆ 1 ಕೆಜಿ ಬೇಳೆ ಹಂಚಿಕೆ ಮಾಡಿತ್ತು. ರಾಜ್ಯದ ಪಡಿತರ ಚೀಟಿ ಫಲಾನುಭವಿಗಳಿಗೆ ತಲಾ 10 ಕೆಜಿ ಅಕ್ಕಿ ಮತ್ತು ಕುಟುಂಬವೊಂದಕ್ಕೆ ತಲಾ 2 ಕೆಜಿ ಗೋಧಿ, 1 ಕೆಜಿ ಬೇಳಡ ಲಭ್ಯವಾಗುತ್ತಿತ್ತು. ಆದರೆ ಈ ಯೋಜನೆ ನವೆಂಬರ್ ಅಂತ್ಯಕ್ಕೆ ಕೊನೆಗೊಳ್ಳಲಿದೆ. ಇನ್ಮುಂದೆ ರಾಜ್ಯದ ಪಾಲಿನ ಆಹಾರ ಧಾನ್ಯ ಮಾತ್ರ ಉಚಿತವಾಗಿ ಲಭ್ಯವಾಗಲಿದೆ.



