Connect with us

Dvgsuddi Kannada | online news portal | Kannada news online

ರಾಜ್ಯದಲ್ಲಿ10 ಸಾವಿರ ಗಡಿ ದಾಟಿದ ಸಾವಿನ ಸಂಖ್ಯೆ; ಇಂದು 7,606 ಪಾಸಿಟಿವ್, 70 ಸಾವು

ಪ್ರಮುಖ ಸುದ್ದಿ

ರಾಜ್ಯದಲ್ಲಿ10 ಸಾವಿರ ಗಡಿ ದಾಟಿದ ಸಾವಿನ ಸಂಖ್ಯೆ; ಇಂದು 7,606 ಪಾಸಿಟಿವ್, 70 ಸಾವು

ಡಿವಿಜಿ ಸುದ್ದಿ, ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದ್ದು, ಈ ವರೆಗೆ  ಕೊರೊನಾದಿಂದ 10 ಸಾವಿರ ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ರಾಜ್ಯದಲ್ಲಿ ಇಂದು 7,606 ಪಾಸಿಟಿವ್ ಪ್ರಕರಣಗಳು ವರದಿಯಾಗಿದ್ದು, 70 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಇದರೊಂದಿಗೆ ಸಾವಿನ ಸಂಖ್ಯೆ 10,036ಕ್ಕೆ ಏರಿಕೆಯಾಗಿದೆ.  ಒಟ್ಟು ಸೋಂಕಿತರ ಸಂಖ್ಯೆ 7,17,915ಕ್ಕೇರಿದೆ.ರಾಜ್ಯದಲ್ಲಿ ಇನ್ನು 1,15,776 ಸಕ್ರಿಯ ಪ್ರಕರಣಗಳಿವೆ.

ಇಂದು ಆಸ್ಪತ್ರೆಯಿಂದ 12,030 ಮಂದಿ ಡಿಸ್ಚಾರ್ಜ್ ಆಗಿದ್ದು, ಇದುವರೆಗೂ ಒಟ್ಟು 5,92,084 ಮಂದಿ ಸೋಂಕಿನಿಂದ ಗುಣಮುಖರಾಗಿದ್ದಾರೆ. 928 ಮಂದಿ ರಾಜ್ಯ ವಿವಿಧ ಆಸ್ಪತ್ರೆಗಳ ಐಸಿಯುನಲ್ಲಿ ಸೋಂಕಿನ ವಿರುದ್ಧ ಹೋರಾಡುತ್ತಿದ್ದಾರೆ.

ಬೆಂಗಳೂರಿನಲ್ಲಿ ಇಂದು 3,498 ಕೊರೊನಾ ಪಾಸಿಟಿವ್ ಪ್ರಕರಣಗಳು ದೃಢವಾಗಿದ್ದು, ಬೆಳಗಾವಿ 444, ಚಿತ್ರದುರ್ಗ 210, ದಕ್ಷಿಣ ಕನ್ನಡ 303, ಹಾಸನ 278, ಮೈಸೂರು 264, ಉಡುಪಿ 317 ಮಂದಿ ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. ಬಳ್ಳಾರಿ 78, ಬೆಂಗಳೂರು ನಗರ 346, ಚಾಮರಾಜನಗರ 40, ಧಾರವಾಡ 93, ಹಾಸನ 49, ಕಲಬುರಗಿ 37 ಪಾಸಿಟಿವ್ ಕೇಸ್ ಗಳಿವೆ.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

Advertisement

ದಾವಣಗೆರೆ

Advertisement
To Top