ಬೆಂಗಳೂರು: ಬ್ರಿಟನ್ ನಲ್ಲಿ ಕೊರೊನಾ ಹೊಸ ರೂಪಾಂತರ ಉಂಟಾಗಿದ್ದು, ಅಲ್ಲಿನ ಜನರಲ್ಲಿ ಆತಂಕ ಮೂಡಿಸಿದೆ. ಇದರ ಮಧ್ಯೆ ಬ್ರಿಟನ್ ನಿಂದ ರಾಜ್ಯಕ್ಕೆ ಕಳೆದ ಮೂರು ದಿನದಲ್ಲಿ185 ಪ್ರಯಾಣಿಕರು ವಿಮಾನದ ಮೂಲಕ ಬೆಂಗಳೂರಿಗೆ ಬಂದಿದ್ದಾರೆ. ಇದರಿಂದ ರಾಜ್ಯಲ್ಲಿಯೂ ಆತಂಕ ಉಂಟಾಗಿದೆ. ಇದೀಗ ಬ್ರಿಟನ್ ನಿಂದ ಬಂದ ಪ್ರಯಾಣಿಕರ ಹುಡುಕಾಟ ಶುರುವಾಗಿದೆ.
ಬ್ರಿಟನ್ ನಿಂದ ಬಂದಿರುವ ವಿಳಾಸ ಪತ್ತೆ ಹಚ್ಚಲು ಬಿಬಿಎಂಪಿ ಈಗಾಲೇ ಕೆಲಸ ಶುರು ಮಾಡಿದೆ. ನಿನ್ನೆ ರಾತ್ರಿಯಿಂದಲೇ ವಿಮಾನ ನಿಲ್ದಾಣದಲ್ಲಿ ಪರೀಕ್ಷೆಗೆ ಒಳ ಪಡಿಸಲಾಗುತ್ತಿದೆ. ಈ ಬಗ್ಗೆ ಮಧ್ಯಾಹ್ನ 2 ಗಂಟೆಗೆ ಕೊರೊನಾ ತಾಂತ್ರಿಕ ಸಲಹ ಸಮಿತಿ ಸಭೆ ಕರೆದಿದೆ. ಈ ಸಭೆಯಲ್ಲಿ ವೈರಸ್ ನಿಯಂತ್ರಣ ಬಗ್ಗೆ ಸರ್ಕಾರಕ್ಕೆ ಸೂಚನೆ ನೀಡಲಿದೆ.



