ಡಿವಿಜಿ ಸುದ್ದಿ, ಬೆಂಗಳೂರು: ಕೊರೊನಾ ವೈರಸ್ ಹಿನ್ನೆಲೆ ಬಿಎಂಟಿಸಿ ಬಸ್ ಗಳಲ್ಲಿ ಮಾಸ್ಕ್ ಕಡ್ಡಾಯವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಮುಂದಾಗಿದ್ದು, ಬಸ್ ನಲ್ಲಿ ಮಾಸ್ಕ್ ಹಾಕದಿದ್ದರೆ 100 ರೂಪಾಯಿ ದಂಡ ವಿಧಿಸಲು ಸೂಚನೆ ನೀಡಿದೆ.
ಇಂದು ಬಿಎಂಟಿಸಿ ಚಕ್ಕಿಂಗ್ ಇನ್ಸ್ ಪೆಕ್ಟರ್ ಗಳು ನಗರ ವಿವಿಧ ಭಾಗದಲ್ಲಿ ಮಾಸ್ಕ್ ಹಾಕದವರಿಗೆ ದಂಡ ವಿಧಿಸುತ್ತಿದ್ದಾರೆ. ಇಂದು 18 ಸಾವಿರದಷ್ಟು ದಂಡವನ್ನು ಕೂಡ ಹಾಕಲಾಗಿದೆ. ಟಿಕೆಟ್ ಚಕ್ಕಿಂಗ್ ವೇಳೆ ಮಾಸ್ಕ್ ಗಳನ್ನೂ ಕೂಡ ಚಕ್ ಮಾಡುವಂತೆ ಬಿಎಂಟಿಸಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದು, ಹೀಗಾಗಿ ಸಾರ್ವಜನಿಕರಿಗೆ ಮಾಸ್ಕ್ ಕಡ್ಡಾಯ ಬಗ್ಗೆ ಅರಿವು ಮೂಡಿಸಲು ಟಿಕೆಟ್ ಜೊತೆ ಮಾಸ್ಕ್ ದಂಡವನ್ನು ವಿಧಿಸುತ್ತಿದ್ದಾರೆ.
ಕೊರೊನಾ ವೈರಸ್ ಎರಡನೇ ಹಂತ ಅಲೆ ಬರುವ ಸಾಧ್ಯತೆ ಇದೆ ಎಂದು ಈಗಾಗಲೇ ತಜ್ಞರು ಸೂಚನೆ ನೀಡಿದ್ಧಾರೆ. ಹೀಗಾಗಿ ಬಿಎಂಟಿಸಿ ಬಸ್ ನಲ್ಲಿ ಕಟ್ಟು ನಿಟ್ಟಿನ ಕ್ರಮಕ್ಕೆ ಮುಂದಾಗಿದೆ.