Connect with us

Dvgsuddi Kannada | online news portal | Kannada news online

ಮುರುಘಾ ಮಠದ ಉತ್ತರಾಧಿಕಾರಿಯಾಗಿ ಬಸವಾದಿತ್ಯ ಶ್ರೀ ಆಯ್ಕೆ

ಪ್ರಮುಖ ಸುದ್ದಿ

ಮುರುಘಾ ಮಠದ ಉತ್ತರಾಧಿಕಾರಿಯಾಗಿ ಬಸವಾದಿತ್ಯ ಶ್ರೀ ಆಯ್ಕೆ

ಚಿತ್ರದುರ್ಗ: ಮುರುಘಾ ಮಠದ ಉತ್ತರಾಧಿಕಾರಿಯಾಗಿ ಬಸವಾದಿತ್ಯ ಶ್ರೀ ಅವರನ್ನು ಆಯ್ಕೆ ಮಾಡಲಾಗಿದೆ.

ಇಂದು ಬೆಳಿಗ್ಗೆ ಮುರುಘಾ ಮಠದ ಶಿರಸಿಂಗಿ ಮಹಾಲಿಂಗ ಸ್ವಾಮಿ ಸಭಾಂಗಣದಲ್ಲಿ ನಡೆದ ಶರಣ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಯಿತು. ಮುರುಘಾ ಮಠದಲ್ಲೇ ಅಧ್ಯಯನ ಮಾಡುತ್ತಿದ್ದ ಬಸವಾದಿತ್ಯ ಶ್ರೀ, ಪೂರ್ವಾಶ್ರಮದಲ್ಲಿ ಚಿತ್ರದುರ್ಗ ತಾಲೂಕಿನ ಹುಲ್ಲೂರು ಗ್ರಾಮದ ಚಂದ್ರಕಲಾ ಶಿವಮೂರ್ತಯ್ಯ ದಂಪತಿಗಳ ಪುತ್ರರಾಗಿದ್ದಾರೆ.

ಮನೆ ಮಾಲೀಕ ಮಡಿದರೆ ಮನೆಗಳಲ್ಲಿ ಇತರರು ಜವಾಬ್ದಾರಿ ತೆಗೆದುಕೊಳ್ಳುತ್ತಾರೆ. ಅದೇ ರೀತಿ ನೂರಾರು ಸಂಘಸಂಸ್ಥೆಗಳು, ಶಾಖಾ ಮಠಗಳು, ಸಂಘಟನೆಗಳು ಇರುವ ಮಠದಲ್ಲಿ ಇಂತಹ ಶೂನ್ಯ ನಿರ್ಮಾಣ ಆಗಬಾರದು. ಶೂನ್ಯವನ್ನು ಭರ್ತಿ ಮಾಡುವ ಸಲುವಾಗಿ ಹರ-ಗುರು ಚರಮೂರ್ತಿಗಳು, ಸಮಾಜದ ಮುಖಂಡರ ಸಮ್ಮುಖದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಮುರುಘಾ ಶರಣರು ತಿಳಿಸಿದರು.

ಸಮಕಾಲೀನ ಸಂಧರ್ಭದ ಆಕಸ್ಮಿಕವಾದ ಹಾಗೂ ಅಷ್ಟೇ ಅರ್ಥಪೂರ್ಣವಾದ ನಿರ್ಧಾರವಾಗಿದೆ. ಬಸವಾದಿತ್ಯ ಎಂಬ ಹೆಸರಿನ ಮುರುಘಾ ಮಠದ ಗುರುಕುಲದಲ್ಲಿ ಅಧ್ಯಯನ ಮಾಡುತ್ತಿರುವ ಮರಿಯನ್ನು ಉತ್ತರಾಧಿಕಾರಿಯನ್ನಾಗಿ ಆಯ್ಕೆ ಮಾಡಲಾಗಿದೆ. ಮುಂದೆ ಅವರ ಶಿಕ್ಷಣ ಎಲ್ಲವನ್ನೂ ಪೂರೈಸಿ ಪಟ್ಟ ಕಟ್ಟಲಾಗುವುದು.ಮುಂದೆ ಯಾವ ಗೊಂದಲವೂ ಆಗಬಾರದು ಎಂದು ತಿಳಿಸಿದರು.

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top