ಡಿವಿಜಿ ಸುದ್ದಿ, ಚಿತ್ರದುರ್ಗ: ಚಳ್ಳಕೆರೆ ತಾಲ್ಲೂಕಿನ ಬುಕ್ಲೊರಹಳ್ಳಿಯ ಜಮೀನೊಂದರಲ್ಲಿ 36 ಲಕ್ಷ ಕಂತೆ–ಕಂತೆ ನೋಟುಗಳು ಪತ್ತೆಯಾಗಿವೆ.
ಬೀದರ್-ಶ್ರೀರಂಗಪಟ್ಟಣ ರಾಷ್ಟ್ರೀಯ ಹೆದ್ದಾರಿಯ ಹೊಲದ ಪೊದಯ ಸಮೀಪ 50, 100 ಹಾಗೂ 2 ಸಾವಿರ ಮುಖಬೆಲೆಯ 36 ಲಕ್ಷ ಹಣ ಪತ್ತೆಯಾಗಿದೆ. ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಿರ್ವಹಿಸುತ್ತಿರುವ ದಿಲೀಪ್ ಬ್ಯುಲ್ಡ್ ಕಂಪನಿಯ ಕಚೇರಿ ಕೂಡ ಸಮೀಪ ಹಣ ಸಿಕ್ಕಿದ್ದು, ಕೆಲವು ದಿನಗಳ ಹಿಂದೆ ದಿಲೀಪ್ ಬ್ಯುಲ್ಡ್ ಕಂಪನಿ ಕಚೇರಿಯಲ್ಲಿ36 ಲಕ್ಷ ಹಣ ಕಳವಾಗಿತ್ತು. ಕಾಮಗಾರಿ ಕೈಗೊಳ್ಳಲು ಅಗತ್ಯವ ವಸ್ತು ಖರೀದಿಗೆ ಬ್ಯಾಂಕಿನಿಂದ ಹಣ ಕಳವು ಮಾಡಲಾಗಿತ್ತು.
ಹಣ ಪತ್ತೆಯಾದ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿತ್ತು. ಸ್ಥಳಕ್ಕೆ ಧಾವಿಸಿದ ಸಿಪಿಐ ಮಂಜುನಾಥ್ ಹಾಗೂ ಎಸ್‌ಐ ಸತೀಶನಾಯ್ಕ್ ಪರಿಶೀಲನೆ ನಡೆಸಿದರು. ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಸ್ಥಳ ಪರಿಶೀಲನೆ ನಡೆಸಿದ್ದಾರೆ. ದಿಲೀಪ್ ಬ್ಯುಲ್ಡ್ ಕಂಪನಿಯಲ್ಲಿ ಕಳವಾಗಿದ್ದ ಹಣವನ್ನು ಬಿಸಾಡಿರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.



