ಚಿತ್ರದುರ್ಗ: ಚಿತ್ರದುರ್ಗ ನಗರಸಭೆ ಜೆಡಿಎಸ್ ಸದಸ್ಯ ಹಾಗೂ ಕೋಟಾ ನೋಟು ದಂಧೆಯಲ್ಲಿ ತೋಡಗಿದ್ದ ಆರೋಪಿ ಚಂದ್ರಶೇಖರ್ ಅಲಿಯಾಸ್ ಕೋಟಾ ನೋಟು ಚಂದ್ರನನ್ನು ಚಿತ್ರದುರ್ಗ ಬಡಾವಣೆ ಪೋಲಿಸರು ಬಂಧಿಸಿದ್ದಾರೆ.
ಚಿತ್ರದುರ್ಗ ನಗರಸಭೆಯ 4ನೇ ವಾರ್ಡ್‌ನ ಸದಸ್ಯನಾಗಿರುವ ಚಂದ್ರಶೇಖರ್, ಮೊದಲಿನಿಂಲೂ ಹಣ ಡಬ್ಲಿಂಗ್, ಕೋಟಾ ನೋಟು ದಂಧೆಯಲ್ಲಿ ತೋಡಗಿದ್ದನು. 10 ವರ್ಷಗಳ ಹಿಂದೆಯೇ ಪೊಲೀಸರು ದೊಡ್ಡ ಪೇಟೆಯಲ್ಲಿರುವ ಹಾಗೂ ಮಹಾವೀರ ಕಾಲೋನಿಯಲ್ಲಿರುವ ಮನೆಗಳ ಮೇಲೆ ದಾಳಿ ನಡೆ ಕೋಟಾ ನೋಟು ಹಾಗೂ ನೋಟು ಮುದ್ರಣದ ಯಂತ್ರವನ್ನು ವಶಪಡಿಸಿಕೊಂಡು ಜೈಲಿಗೆ ಕಳುಹಿಸಿದ್ದರು. ಜೈಲಿನಿಂದ ಹೊರ ಬಂದ ಮೇಲೂ ಕೋಟಾ ನೋಟು ದಂಧೆಯನ್ನು ನಿಲ್ಲಿಸದೇ ಮುಂದುವರೆಸಿಕೊಂಡು ಬಂದಿದ್ದನು.
ರಾಜ್ಯ ಹಾಗೂ ಹೊರ ರಾಜ್ಯಗಳ ಜನರಿಗೆ ಹಣ ವಂಚಿಸಿರುವ ಪ್ರಕರಣಗಳು ಈತನ ಮೇಲೆ ದಾಖಲಾಗಿವೆ. ಚಂದ್ರಶೇಖರ್ ಅನೇಕ ಪ್ರಕರಣಗಳಲ್ಲಿ ಜಾಮೀನು ಪಡೆದುಕೊಂಡು ಹೊರಗೆ ಬಂದಿದ್ದನ. ದೊಡ್ಡಬಳ್ಳಾಪುರದ ನಾಗರಾಜ್ ಎಂಬುವರಿಂದ ಆರು ಲಕ್ಷ ಪಡೆದು, ಆತನಿಗೆ ವಾಪಸ್ ಹದಿನೆಂಟು ಲಕ್ಷ ನಕಲಿ ನೋಟು ನೀಡಿ ವಂಚಿಸಿದ್ದಾನೆ. ಈ ಹಿನ್ನೆಲೆಯಲ್ಲಿ ನಾಗರಾಜ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಈ ಪ್ರಕರಣದ ಹಿಂದೆ ಬಿದ್ದ ಪೊಲೀಸರು ಚಂದ್ರಶೇಖರ್‌ಗಾಗಿ ಹುಡುಕಾಟ ನಡೆಸಿದ್ದರು. ಆಂಧ್ರಪ್ರದೇಶದಲ್ಲಿ ತಲೆಮರೆಸಿಕೊಂಡಿದ್ದನು. ಇದೀಗ ಚಿತ್ರದುರ್ಗದ ಬಡಾವಣೆ ಠಾಣೆ ಪೊಲೀಸ್ ಇನ್ಸ್‌ಪೆಕ್ಟರ್ ಶಂಕರಪ್ಪ ಚಂದ್ರಶೇಖರ್‌ನನ್ನು ಬಂಧಿಸಿದ್ದಾರೆ.