ಚಿತ್ರದುರ್ಗ: ನಡು ರಸ್ತೆ ವ್ಯಕ್ತಿಯೊಬ್ಬ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಗರದ ಅಂಬೇಡ್ಕರ್ ಸರ್ಕಲ್ನಲ್ಲಿ ಇಂದು (ಅ.29) ಮಧ್ಯಾಹ್ನ ನಡೆದಿದೆ. ಮೈಮೇಲೆ ಪೆಟ್ರೋಲ್ ಸುರಿದುಕೊಂಡು, ಬೆಂಕಿ ಹಚ್ಚಿಕೊಂಡು ಪ್ರಾಣ ಉಳಿಸಿಕೊಳ್ಳಲು ಕೂಗಾಡುತ್ತ ರಸ್ತೆಯಲ್ಲಿ ಓಡಿದ್ದಾನೆ. ಈ ಭೀಕರ ದೃಶ್ಯವನ್ನು ಸ್ಥಳೀಯರು ಮೊಬೈಲ್ ನಲ್ಲಿ ಸೆರೆಯಾಗಿದ್ದು, ವೈರಲ್ ಆಗಿದೆ.
ಗೋಪಿನಾಥ್ (57) ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿಯಾಗಿದ್ದು, ಕೂಡಲೇ ಆತನ್ನು ಗೋಣಿ ಚೀಲದಿಂದ ಸ್ಥಳೀಯರು ಮತ್ತು ಪೊಲೀಸ್ ರಕ್ಷಣೆ ಮಾಡಿದ್ದಾರೆ. ಆಂಬುಲೆನ್ಸ್ ಮೂಲಕ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದಾರೆ. ಗೋಪಿನಾಥ್ ಶೇ.50 ರಷ್ಟು ಸುಟ್ಟು ಹೋಗಿದ್ದಾನೆ. ಕೃತ್ಯಕ್ಕೆ ಸ್ಯಾವ ಕಾರಣಕ್ಕೆ ಆತ್ಮಹತ್ಯೆ ಯತ್ನಿಸಿದ ಎಂಬುವುದು ತಿಳಿದುಬಂದಿಲ್ಲ. ಗೋಪಿನಾಥ್ ಮಾನಸಿಕ ಅಸ್ವಸ್ಥ ಎಂಬ ಶಂಕೆ ವ್ಯಕ್ತವಾಗಿದೆ. ಚಿತ್ರದುರ್ಗ ನಗರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.