Connect with us

Dvgsuddi Kannada | online news portal | Kannada news online

ಚಿತ್ರದುರ್ಗ: ನ. 24ರಂದು ರೈತರ ಸಭೆ, ಹೋರಾಟಕ್ಕೆ ಕೈ ಜೋಡಿಸುವಂತೆ ಮನವಿ

ಜಿಲ್ಲಾ ಸುದ್ದಿ

ಚಿತ್ರದುರ್ಗ: ನ. 24ರಂದು ರೈತರ ಸಭೆ, ಹೋರಾಟಕ್ಕೆ ಕೈ ಜೋಡಿಸುವಂತೆ ಮನವಿ

ಚಿತ್ರದುರ್ಗ: ಜಿಲ್ಲೆಯ ಚಳ್ಳಕೆರೆ ತಾಲೂಕಿನ ಸಾಣೆಕೆರೆ ಗ್ರಾಮಪಂಚಾಯತಿ ವ್ಯಾಪ್ತಿಯ ಕಾಪರಹಳ್ಳಿ, ಹೆಗ್ಗೆರೆ, ಜಡೆಕುಂಟೆ, ಹುಲಿಕುಂಟೆ, ಕಂದಕೆರೆ, ಗೊಲ್ಲಹಳ್ಳಿ ಸೇರಿದಂತೆ ಎಂಟು-ಹತ್ತು ಹಳ್ಳಿಗಳ ರೈತರು ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ. ಕಾರಣ ಹೆಗ್ಗೆರೆಯ ರಾಷ್ಟ್ರೀಯ ಹೆದ್ದಾರಿ 150ರಲ್ಲಿ 2007ರಿಂದ ಕಾರ್ಯಾಚರಣೆ ನಡೆಸುತ್ತಿರುವ ಪ್ರಕಾಶ್ ಸ್ಪಾಂಜ್ ಐರನ್ ಪವರ್ ಪ್ರೈವೆಟ್ ಲಿಮಿಟೆಡ್. ಇದು ಪ್ರಭಾವಿ ಹಣವಂತ ಮಾಲೀಕ ಆರ್. ಪ್ರವೀಣ್ ಚಂದ್ರ ಅವರದ್ದು. ಈ ಕಾರ್ಖಾನೆಯಿಂದ ಹೊರಬರುವ ಕಲುಷಿತ ನೀರು ಕುಡಿದು ಜಾನುವಾರುಗಳು ಸಾಯುತ್ತಿವೆ. ರಾಸಾಯನಿಕ ತ್ಯಾಜ್ಯದಿಂದ ಭೂಮಿ ಫಲವತ್ತತೆ ಕಳೆದುಕೊಳ್ಳುತ್ತಿದ್ದು, ರೈತರಿಗೆ ಸಾಕಷ್ಟು ತೊಂದರೆಯಾಗುತ್ತಿದೆ. ನೊಂದ ರೈತರ ಅಳಲನ್ನು ಗಟ್ಟಿಯಾದ ಧ್ವನಿಯಲ್ಲಿ ಅದೇ ರೈತರ ಹೆಸರಿನಲ್ಲಿ ಓಟ್ ತೆಗೆದುಕೊಂಡವರಿಗೆ ಕೂಗಿ, ಕಿರುಚಿ‌‌ ಹೇಳಬೇಕಿದೆ. ನಮ್ಮ ಧ್ವನಿಗೆ ನಿಮ್ಮ ಧ್ವನಿಗಳೂ ಜೊತೆಯಾಗಲಿ. ಬನ್ನಿ ನಮ್ಮ ಸಭೆಯಲ್ಲಿ ಭಾಗವಹಿಸಿ. ನಮ್ಮ ಹೋರಾಟಕ್ಕೆ ದೈಹಿಕ, ಮಾನಸಿಕ, ನೈತಿಕ ಬೆಂಬಲ ನೀಡಿ. ಭವಿಷ್ಯದಲ್ಲಿ ನಮ್ಮ ಬದುಕು ಭರವಸೆಯ ಕುರಿತಾಗಿ ಚರ್ಚಿಸೋಣ, ಚಿಂತಿಸೋಣ, ತಾರ್ಕಿಕ ಶಾಶ್ವತ ಪರಿಹಾರ ಕಂಡುಕೊಳ್ಳೋಣ. ನಮ್ಮ ಕಷ್ಟ ಕಾರ್ಪಣ್ಯಗಳನ್ನು ಕೇಳುವ ಕೃಪೆ ಮಾಡಿ. ನಿಮ್ಮ ಅಮೂಲ್ಯ ಸಲಹೆ ಸೂಚನೆಗಳನ್ನು ನೀಡಿ ಎಂದು ರೈತ ಸಹೋದರರು ಮನವಿ‌ ಮಾಡಿಕೊಂಡಿದ್ದಾರೆ. ಸಭೆ ನಡೆಯುವ ದಿನಾಂಕ: 24/11/2020 ಸ್ಥಳ: ಕಾಪರಹಳ್ಳಿ-ಹೆಗ್ಗೆರೆ, ಸಾಣೆಕೆರೆ ಗ್ರಾಮ ಪಂಚಾಯತಿ, ಚಳ್ಳಕೆರೆ ಮತ್ತು ಹಿರಿಯೂರು ನಡುವೆ, ಚಿತ್ರದುರ್ಗ ಜಿಲ್ಲೆ ಸಂಪರ್ಕಿಸಿ: 8951299534

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಜಿಲ್ಲಾ ಸುದ್ದಿ

To Top
(adsbygoogle = window.adsbygoogle || []).push({});