Connect with us

Dvgsuddi Kannada | online news portal | Kannada news online

ಚಕ್ ಬೌನ್ಸ್ ಕೇಸ್; ಮಾಳವಿಕಾ ಸಿದಾರ್ಥ್ ಗೆ ಜಾಮೀನು ಮಂಜೂರು

ಪ್ರಮುಖ ಸುದ್ದಿ

ಚಕ್ ಬೌನ್ಸ್ ಕೇಸ್; ಮಾಳವಿಕಾ ಸಿದಾರ್ಥ್ ಗೆ ಜಾಮೀನು ಮಂಜೂರು

ಡಿವಿಜಿ ಸುದ್ದಿ, ಚಿಕ್ಕಮಗಳೂರು: ಕೆಫೆ ಕಾಫಿ ಡೇ ಮುಖ್ಯಸ್ಥ ದಿವಂಗತ ಸಿದ್ಧಾರ್ಥ್ ಹೆಗ್ಡೆ ಪತ್ನಿ ಮಾಳವಿಕಾ ಸಿದ್ಧಾರ್ಥ್ ಗೆ ಚೆಕ್ ಬೌನ್ಸ್ ಪ್ರಕರಣದಲ್ಲಿ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.

ಸಿದ್ಧಾರ್ಥ್ ಹೆಗ್ಡೆ ಅವರ ಎಬಿಸಿ ಸಂಸ್ಥೆ ವಿರುದ್ಧ ಕಾಫಿ ಬೆಳೆಗಾರರು ಚೆಕ್ ಬೌನ್ಸ್ ಪ್ರಕರಣದಲ್ಲಿ ಕೋರ್ಟ್ ಮೆಟ್ಟಿಲೇರಿದ್ದರು. ಸಿದ್ಧಾರ್ಥ್ ಪತ್ನಿ ಮಾಳವಿಕಾ ಸೇರಿದಂತೆ 8 ಜನರ ವಿರುದ್ಧ ಚೆಕ್ ಬೌನ್ಸ್ ಪ್ರಕರಣ ದಾಖಲಾಗಿತ್ತು. ಕೋರ್ಟ್ ಗೆ ಹಾಜರಾಗಿ ವಿಚಾರಣೆ ಎದುರಿಸದ ಹಿನ್ನೆಲೆಯಲ್ಲಿ ಮಾಳವಿಕಾ ಸೇರಿದಂತೆ ಐವರ ವಿರುದ್ಧ ಬಂಧನ ವಾರಂಟ್ ಜಾರಿಯಾಗಿತ್ತು.

ಇದೀಗ ಮಾಳವಿಕಾ ಕೋರ್ಟ್ ಗೆ ಹಾಜರಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಮೂಡಿಗೆರೆ ಜೆಎಂಎಫ್ ಸಿ ಕೋರ್ಟ್ ಮಾಳವಿಕಾ ಸೇರಿದಂತೆ ಐದು ಜನರಿಗೆ ಜಾಮೀನು ಮಂಜೂರು ಮಾಡಿದೆ.

 

Dvgsuddi.com is a live Kannada news portal. Kannada news online. political, information, crime, film, Sports News in Kannada

Click to comment

Leave a Reply

Your email address will not be published. Required fields are marked *

More in ಪ್ರಮುಖ ಸುದ್ದಿ

To Top