ನವದೆಹಲಿ: ರಾಜ್ಯದ 5,949 ಗ್ರಾಮ ಪಂಚಾಯತ್‌ಗಳಿಗೆ 15ನೇ ಹಣಕಾಸು ಆಯೋಗ ಅನುದಾನವನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದ್ದು, ಮೊದಲ ಕಂತಿನಲ್ಲಿ 448.29 ಕೋಟಿ ರೂ. ಬಿಡಗಡೆ ಮಾಡಲಾಗಿದೆ ಎಂದು ಕೇಂದ್ರ ಪಂಚಾಯತ್ ರಾಜ್ ಸಚಿವಾಲಯ ತಿಳಿಸಿದೆ.
ಈ ಮೋತ್ತವನ್ನು ವೇತನ ಮತ್ತು ಸ್ಥಾಪನ ವೆಚ್ಚಗಳಿಗೆ ಬಳಸದೆ, ಸ್ಥಳೀಯ ಅಗತ್ಯತೆ ಗ್ರಾಮ ಪಂಚಾಯತ್‌ಗಳು ಬಳಕೆ ಮಾಡಿಕೊಳ್ಳಬಹುದಾಗಿದೆ. ಬಯಲು ಶೌಚಾಲಯ ಮಕ್ತ ಆಂದೋಲನ, ಸ್ವಚ್ಛತೆ, ಕಸ ಸಂಗ್ರಹಣೆ, ಕುಡಿಯುವ ನೀರು ಪೂರೈಕೆ, ಮಳೆ ನೀರು ಕೊಯ್ಲು, ನೀರಿನ ಮರುಬಳಕೆ ಕಾರ್ಯಕ್ರಮಗಳಿಗೆ ಈ ಹಣವನ್ನು ಬಳಕೆ ಮಾಡಲು ಚಿವಾಲಯ ಸೂಚಿಸಿದೆ.



