ಬಾಗಲಕೋಟೆ : ಎರಡು ಬೈಕ್ ಗಳಿಗೆ ಕಾರು ಡಿಕ್ಕಿಯಾಗಿ ನಾಲ್ವರು ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಜಮಖಂಡಿ ತಾಲೂಕಿನ ಆಲಗೂರು ಗ್ರಾಮದ ಬಳಿ ನಡೆದಿದೆ.
ಮೃತರನ್ನು ಹನುಮಂತ ಕಾಂಬಳೆ (38) ಅಮೋಘಿ ಡವಳೇಶ್ವರ (26) ಮಹದೇವ ಬಿದರಿ (26) ಮಹದೇವ ತಾಯಿ ಯಮನವ್ವ ಬಿದರಿ (58) ಎಂದು ಗುರುತಿಸಲಾಗಿದೆ. ಜಮಖಂಡಿಯಿಂದ ವಿಜಯಪುರಕ್ಕೆ ಹೊರಟಿದ್ದ ಕಾರು ಜಮಖಂಡಿ ವಿಜಯಪುರ ಮಾರ್ಗದಲ್ಲಿ ಒಂದು ಬೈಕ್ ಗೆ ಡಿಕ್ಕಿ ಹೊಡೆದು , ಮತ್ತೆ ಅದೇ ಮಾರ್ಗದಲ್ಲಿ ನೂರು ಮೀಟರ್ ದೂರದಲ್ಲಿ ಮತ್ತೊಂದು ಬೈಕ್ ಗೆ ಡಿಕ್ಕಿಯಾಗಿದೆ. ಕೂಡಲೇ ಚಾಲಕ ಸ್ಥಳದಿಂದ ಕಾಲ್ಕಿತ್ತಿದ್ದು, ಘಟನೆ ನಡೆದ ಸ್ಥಳಕ್ಕೆ ಜಮಖಂಡಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.